ಕಲ್ಬುರ್ಗಿ ಮೇ 7:2024ರ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನವು ಬಹುತೇಕ ಎಲ್ಲಾ ಕಡೆ ಶಾಂತಿಯುತವಾಗಿ ನೆರವೇರಿತು. ಇಂದು ಬೀದರ್ ಕಲಬುರಗಿ ಬಾಗಲಕೋಟೆ ರಾಯಚೂರು ಹುಬ್ಬಳ್ಳಿ ಧಾರವಾಡ ಬೆಳಗಾoವ ಹಾಗೂ ಉತ್ತರ ಕನ್ನಡ ದಲ್ಲಿ ಎರಡನೇ ಹಂತದ ಮತದಾನವು ನಡೆಯಿತು. ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳನ್ನು ಬದಿಗಿಟ್ಟು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಗಣ್ಯತೀತ ಗಣ್ಯರು ತಮ್ಮ ಮತದ ಹಕ್ಕನ್ನು ಚಲಾಯಿಸಿದರು. ಕಲಬುರ್ಗಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಮಾನ್ಯ ಶ್ರೀ ಮಲ್ಲಿಕಾರ್ಜುನ್ ಖರ್ಗೆಯವರು ಹಾಗೂ ಗುಜರಾತಿನಲ್ಲಿ ಪ್ರಧಾನಮಂತ್ರಿ ಮಾನ್ಯ ಶ್ರೀ ನರೇಂದ್ರ ಮೋದಿಯವರು ಮತದಾನವನ್ನು ಮಾಡಿದರು. ಸಾಮಾನ್ಯವಾಗಿ ಎಲ್ಲಾ ಕಡೆಯಲ್ಲಿಯೂ ಬಿಸಿಲಿನ ತಾಪಮಾನ ಹೆಚ್ಚಿದ್ದರೂ ಕೂಡ ಮತಬಾಂಧವರು ಅದನ್ನು ಲೆಕ್ಕಿಸದೆ ಮತಗಟ್ಟೆಗೆ ಬಂದು ತಮ್ಮ ಮತವನ್ನು ಚಲಾಯಿಸುತ್ತಿರುವ ದೃಶ್ಯ ಕಂಡುಬಂದಿತ್ತು. ಕಲಬುರ್ಗಿಯಲ್ಲಿ ಶೇಕಡಾ 66 ರಷ್ಟು ಮತದಾನವು ನಡೆದಿರುವುದು ಕಂಡುಬಂದಿದೆ.
ವರದಿ : ಬಿಸಿಲು ಕೂಗು ಸುದ್ದಿ ಪತ್ರಿಕೆ.