Google search engine
ಮನೆಬಿಸಿ ಬಿಸಿ ಸುದ್ದಿಕಲಬುರಗಿ : ಶಾಲಾ ವಾಹನ ಹರಿದು ನಾಲ್ಕು ವರ್ಷದ ಮಗು ಮೃತ್ಯು.

ಕಲಬುರಗಿ : ಶಾಲಾ ವಾಹನ ಹರಿದು ನಾಲ್ಕು ವರ್ಷದ ಮಗು ಮೃತ್ಯು.


ಕಲ್ಬುರ್ಗಿ : ಶಾಲಾ ವಾಹನ ಹರಿದು ನಾಲ್ಕು ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಫ್ಜಲ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಪುರ ಗ್ರಾಮದಲ್ಲಿ ಬುಧವಾರ ನಡೆದಿದೆ.
ಶಿವಪುರ ಗ್ರಾಮದ ರಾಜಶೇಖರ್ ಎಂಬವರ ಪುತ್ರಿ
ಖುಷಿ ಬನ್ನಟ್ಟಿ (4) ಮೃತ ಮಗು.ಶಾಲಾ ವಾಹನ ಚಾಲಕ ಶ್ರೀಶೈಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಶಾಲಾ ವಾಹನದಲ್ಲಿ ಬಂದಿಳಿದ ಮಗು ತನ್ನ ತಂದೆಯನ್ನು ಕಂಡು ವಾಹನದ ಹಿಂಬದಿಯಾಗಿ ಓಡಿತ್ತು. ಇದನ್ನು ಗಮನಿಸದ ಚಾಲಕ ಅಷ್ಟರಲ್ಲಿ ವಾಹನವನ್ನು ಹಿಂದಕ್ಕೆ ತಿರುಗಿಸಿಕೊಳ್ಳುವಾಗ ಹಿಂಬದಿ ಚಕ್ರದ ಅಡಿಗೆ ಬಾಲಕಿ ಸಿಲುಕಿ ಪ್ರಾಣ ಬಿಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಚಾಲಕನ ನಿರ್ಲಕ್ಷ್ಯ ಮಗುವಿನ ಸಾವಿನ ಕಾರಣ ಎಂದು ಮೃತ ಬಾಲಕಿ ಪೋಷಕರು ಆರೂಪಿಸಿದ್ದು ಈ ಕುರಿತು ಆಫ್ಜಲ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments