ಆಳಂದ: ತಾಲ್ಲೂಕಿನ ನಿಂಬಾಳ ಗಡಿ ಚೆಕ್ ಪೋಸ್ಟ್ ಕೇಂದ್ರಕ್ಕೆ ಮಂಗಳವಾರ ಜಿಲ್ಲಾಧಿಕಾರಿ ಪೌಜಿಯಾ ತರನ್ನುಮ್ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ ಹಾಕ ಭೇಟಿ ನೀಡಿ ಗಡಿ ತಪಾಸಣೆ ಅಧಿಕಾರಿಗಳಿಗೆ ಗಡಿ ಮಾರ್ಗದಲ್ಲಿ ಹೆಚ್ಚಿನ ಕಟ್ಟೆಚ್ಚರವಹಿಸಲು ಬಿಗಿ ಕ್ರಮ ಕೈಗೊಳ್ಳಲು ತಿಳಿಸಿದ ಘಟನೆ ನಡೆಯಿತು.
ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನಲೆಯಲ್ಲಿ ನೆರೆಯ ಮಹಾರಾಷ್ಟ್ರದಿಂದ ನರ ಸಂಪರ್ಕ ಕಲ್ಪಿಸುವ ಆಳಂದ ತಾಲ್ಲೂಕಿನ ನಿಂಬಾಳ, ಹಿರೋಳಿ, ಖಜೂರಿ ಮಾರ್ಗದ ಗಡಿ ಚೆಕ್ ಪೋಸ್ಟ್ ಮೇಲೆ ಅಧಿಕಾರಿಗಳು ಎಚ್ಚರವಹಿಸಬೇಕು, ರಾಜ್ಯದ ಒಳಗೆ ಹಾಗೂ ಹೊರ ಸಂಪರ್ಕಿಸುವ ವಾಹನಗಳ ತಪಾಸಣೆ ಕಟ್ಟುನಿಟ್ಟು ಕೈಗೊಳ್ಳಲು ಜಿಲ್ಲಾಧಿಕಾರಿಗಳು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು.
ಚೆಕ್ ಪೋಸ್ಟ್ ಗಳ ಮೇಲೆ ಅಧಿಕಾರಿಗಳ ರಿಜಿಸ್ಟರ್ ಪರಿಶೀಲಿಸಿದರು, ಸ್ಥಳದಲ್ಲಿ ಅಗತ್ಯ ಕುಡಿಯುವ ನೀರು, ನೆರಳು, ವಿದ್ಯುತ್, ಪ್ಯಾನ್ ಮತ್ತಿತರ ಸೌಲಭ್ಯಗಳ ಸಮರ್ಪಕವಾಗಿ ಕಲ್ಪಿಸಲು ತಹಶೀಲ್ದಾರ್ ಪ್ರಕಾಶ ಹೊಸಮನಿ ಅವರಿಗೆ ತಿಳಿಸಿದರು.ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯಕುಮಾರ ಹಾರ, ತಹಶೀಲ್ದಾರ್ ಪ್ರಕಾಶ ಹೊಸಮನಿ, ತಾಪಂ ಇಒ ಮಾನಪ್ಪ ಕಟ್ಟಿಮನಿ, ಎಆರ್ ಒ ಮಹಾಂತೇಶ ಮುಳಗುಂದ, ಶಿರಸ್ತೇದಾರ ಶ್ರೀನಿವಾಸ ಕುಲಕರ್ಣಿ, ಶರಣಬಸಪ್ಪ ಹಕ್ಕಿ, ಆನಂದ ಪೂಜಾರಿ, ಬಸವರಾಜ ಸಿಂಗಶೆಟ್ಟಿ, ಸಿಪಿಐ ಸಿದ್ರಾಮಯ್ಯ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.