ಅಫಜಲಪುರ: ಚಲಿಸುತ್ತಿದ್ದ ಕಾರು ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡದಿರುವ ಘಟನೆ ತಾಲ್ಲೂಕಿನ ಶಿರವಾಳ್ ಗ್ರಾಮದ ಮಾರ್ಗ ಮಧ್ಯೆ ಗುರುವಾರ ರಾತ್ರಿ ಸಂಭವಿಸಿದೆ.
ಕಾರು ಚಲಾಯಿಸುತ್ತಿದ್ದ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಪೂಜಾರಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಮೇಶ್ ಪೂಜಾರಿಯವರು ಕಲಬುರಗಿಯಿಂದ ತಮ್ಮ ಸ್ವಗ್ರಾಮ ಉಡಚಾಣ್‍ಕ್ಕೆ ಕಾರು ಚಲಾಯಿಸಿಕೊಂಡು ಹೋಗುವ ವೇಳೆ ಅಪಘಾತ ಸಂಭವಿಸಿದೆ.
ರಸ್ತೆ ತಿರುವಿನಲ್ಲಿ ಅಪಘಾತ ಸಂಭವಿಸಿದ್ದು, ಮರಕ್ಕೆ ಗುದ್ದಿ ಕಾರು ಮುಂದೆ ಹೋಗಿ ನಿಂತಿದ್ದರಿಂದ ಕಾರು ಜಖಂಗೊಂಡಿದೆ. ಆದಾಗ್ಯೂ, ರಮೇಶ್ ಪೂಜಾರಿಯವರು ಸಣ್ಣಪುಟ್ಟ ಗಾಯಗಳನ್ನು ಹೊಂದಿದ್ದು, ಅಪಘಾತದ ಕುರಿತು ಸಾಕಷ್ಟು ಬಿಸಿಬಿಸಿ ಚರ್ಚೆಗಳು ಆರಂಭವಾಗಿವೆ.
ಈ ಕುರಿತು ಮಾಹಿತಿ ನೀಡಲು ರಮೇಶ್ ಪೂಜಾರಿಯವರು ಮಾರ್ಚ್ 29ರಂದು ಬೆಳಿಗ್ಗೆ 11-15ಕ್ಕೆ ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನೂ ಸಹ ಕರೆದಿದ್ದಾರೆ.