Google search engine

ಪತ್ರಕರ್ತರು

ಪತ್ರಕರ್ತರು
—————-
ಉದ್ಯಮಿಗಳ ತೆಕ್ಕೆಗೆ
ಮಾಧ್ಯಮಗಳು ಜಾರಿದ ಗಳಿಗೆ
ಬುದ್ದಿಗೂ ಲಾಕ್ ಬಿದ್ದು
ಸುದ್ದಿಗಳು ಮಾರಾಟಕ್ಕಿವೆ..!!

ಜಾಹಿರಾತುಗಳೇ ಆಕ್ಸಿಜನ್ ಎಂದಾಗ
ಭ್ರಷ್ಟರೇ ಪುಟ ಪರದೆಯಲ್ಲಿ ಹೀರೊಗಳು
ಪತ್ರಕರ್ತರೂ ಮಾರಾಟವಾದರು
ಸುಳ್ಳು-ಗೊಳ್ಳು ಬರೆದಾಗ..!!

Contact Your\’s Advertisement; 9538528244

ಸತ್ಯ ಮರೆಮಾಚಿತು ಹತ್ಯೆಯ ಘಟನೆ
ಸಾವಿಗೆ ಕಾರಣ ಗೊತ್ತಿದ್ದೂ ನಿಗೂಢವಾದಾಗ
ಸಾವಿರ ಸಂಕಟಗಳು ಸಂಘರ್ಷ ಹೂಡುತ್ತವೆ
ಪ್ರಬುದ್ಧ ಪತ್ರಕರ್ತನ ಎದೆಯಾಗ…!!

ಜಾತ್ರೆ ಪಾದಯಾತ್ರೆ ಪುಟ ಸೇರುತ್ತವೆ
ಧರಣಿ ಪ್ರತಿಭಟನೆ ಕಸದ ಬುಟ್ಟಿಗೆ ಬೀಳುತ್ತವೆ
ಪುರಾಣ ಆಶಿರ್ವಚನಕ್ಕೆ ಅರ್ಧ ಪುಟ
ನ್ಯಾಯದ ಆಕ್ರೋಶಕ್ಕೆ ಪೂರ್ಣ ಕತ್ತರಿ…!!

ಉದ್ಯಮದ ಮಾಧ್ಯಮಗಳಲ್ಲೂ
ಇದ್ದಾರಣ್ಣ ಮಾರಾಟವಾಗದ ಶುದ್ದರು
ಬೆದರಿಕೆ ಎದುರಾದರೂ ಬಂಡೇಳುತ್ತಾರೆ
ಬರೆಯುವ ಕೈಗಳ ಸಂಕೋಲೆ ಹರಿದು
ಹೊರಾಟಗಳ ದನಿಯಾಗುತ್ತಾರೆ
ನೊಂದವರ ಕಣ್ಣೀರು ಒರೆಸುತ್ತಾರೆ..

— ಮಡಿವಾಳಪ್ಪ ಹೇರೂರ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments