Google search engine
ಮನೆUncategorizedದೇಶದ ವೈವಿದ್ಯತೆಯಲ್ಲಿ ಏಕತೆ ಸಾರುವ ಹಬ್ಬಗಳ ಪಾತ್ರ ಮಹತ್ವದಾಗಿದೆ

ದೇಶದ ವೈವಿದ್ಯತೆಯಲ್ಲಿ ಏಕತೆ ಸಾರುವ ಹಬ್ಬಗಳ ಪಾತ್ರ ಮಹತ್ವದಾಗಿದೆ

Holi kamadahan

ಕಲಬುರಗಿ: ಹಿಂದಿನ ನಮ್ಮ ಪೂರ್ವಜರು ಕುಸುಬೆ ಎಣ್ಣೆ, ಸೇಂಗಾ, ಬೆಲ್ಲ ತಿಂದು ಬ್ರಾಹ್ಮಿಮೂರ್ಹತದಲ್ಲಿ ಎದ್ದು ಹೊಲದಲ್ಲಿ ಕೆಲಸ ಮಾಡಿ ಸದೃಢರಾಗಿದ್ದರು. ಆದರೆ ಈಗ ಸೇಂಗಾ ತಿಂದು ಎಣ್ಣೆ ಕುಡಿಯುತ ಬ್ರಾಹ್ಮಿ ಮೂರ್ಹತದಲ್ಲಿ ಮಲಗಿದರೆ ಒಳ್ಳೆಯ ಆರೋಗ್ಯ ಸಾಧ್ಯವೇ ಎನ್ನುತ್ತ ನೆರೆದಿದ್ದ ನೂರಾರು ಜನರು ನಗಿಸಿ ಮನುಷ್ಯರು ನಗದೆ ಇದ್ದವರು ? ದೇವರು ಎಂದು ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಹರಸೂರ ಅಭಿಪ್ರಾಯಪಟ್ಟರು.

 

ವಿದ್ಯಾನಗರದಲ್ಲಿ ಮಲ್ಲಿಕಾರ್ಜುನ ತರುಣ ಸಂಘದ ವತಿಯಿಂದ ಹಮ್ಮಿಕೊಂಡ ಕಾಮದಹನ ಕಾರ್ಯಕ್ರಮದಲ್ಲಿ ಯುವಕರನ್ನು ಉದ್ದೇಶಿಸಿ ಮಾತನಾಡಿದ ಹಾಸ್ಯ ಕಾರ್ಯಕ್ರಮ ಚಾಲನೆ ನೀಡಿದರು.

 

Contact Your\’s Advertisement; 9538528244

 

ಭಾರತ ದೇಶ ಭಾವೈಕ್ಯತೆಗೆ ಹೆಸರಾದ ದೇಶ ಪ್ರತಿಯೊಂದು ಹಬ್ಬವು ತನ್ನದೆ ಆದ ವೈಶಿಷ್ಟ್ಯತೆ ಹೊಂದಿರುವ ದೇಶ, ವೈವಿದ್ಯತೆಯಲ್ಲಿ ಏಕತೆ ಸಾರುವ ಹಬ್ಬ ಹರಿದಿನಗಳ ತವರೂರಾಗಿದೆ. ಕಾಮದಹನವು ನಮ್ಮ ಪೌರಾಣಿಕ, ಚಾರಿತ್ರಿಕ ಅಂಶಗಳೊಂದಿಗೆ ಬೆಸೆದುಕೊಂಡಿದೆ. ಹಿರಣ್ಯಕಶಪುವಿನ ತಂಗಿ ಹೋಲಿಕಾ ಭಕ್ತ ಪ್ರಲ್ಹಾದನನ್ನು ತನ್ನ ಅಗ್ನಿವರದ ಕೃಪೆಯಿಂದ ಕೊಲ್ಲಲು ಮುಂದಾದಾಗ ಅವಳ ವರವೆ ಅವರಳಿಗೆ ಶಾಪವಾಯಿತು ಎಂದು ಕತೆಯ ಮೂಲಕ ಹೋಳಿ ಹಬ್ಬದ ಕುರಿತು ಮಾತನಾಡಿದರು.

 

ಇಂದೊಂದು ಬಣ್ಣಗಳ ಹಬ್ಬವಾಗಿದ್ದು, ವಸಂತಕಾಲ ಆಗಮನ ಹೊಸ್ತಿಲಲ್ಲಿ ಆಚರಿಸಲಾಗುವುದು ಎನ್ನುತ ಆಧುನಿಕ ಆಡಂಬರದಲ್ಲಿ ನಮ್ಮ ಪಾರಂಪರಿಕ ಹಬ್ಬಗಳ ಆಚರಣೆ ಅರ್ಥ ಕಳೆದುಕೊಳ್ಳುತ್ತಿವೆ ಎನ್ನುತ ಇಂದಿನ ಯುವಕರು ಹಬ್ಬಗಳು ಮನೋರಂಜನೆಗಾಗಿ ಸೀಮಿತಗೊಳಿಸದೆ ಅವುಗಳ ಅರ್ಥ ತಿಳಿದುಕೊಂಡು ಆಚರಿಸಿದರೆ ಬದುಕಿಗೆ ಒಂದಿಷ್ಟು ಅರ್ಥ ಬರುತ್ತದೆ ಎಂದು ಕಳವಳ ವ್ಯಕ್ತಪಡಿಸುತ್ತ ಹೋಳಿ ಹುಣ್ಣಿಮೆ ಹಿರಿಮೆ ಮತ್ತು ಗರಿಮೆ ಕುರಿತು ಖ್ಯಾತವಾಗ್ಮಿಗಳಾದ ಡಾ. ಕೆ. ಗಿರಿಮಲ್ಲ ಅವರು ಮಾತನಾಡಿದರು.

 

 

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಸಾಹಿತಿಗಳಾದ ಎಂ.ಎನ್. ಸುಗಂಧಿ ಅವರು ಮಾತನಾಡತ್ತ, ಭಾರತೀಯರ ಪರಂಪರೆಯಲ್ಲಿ ನಂಬಿಕೆ ಹಾಗೂ ವೈಶಿಷ್ಟ್ಯತೆಯಿಂದ ಕೂಡಿದ್ದು, ಯಾವುದೇ ಲಿಂಗ, ಜಾತಿ, ಧರ್ಮ, ವಯಸ್ಸು, ದ್ವೇಶವಿಲ್ಲದ ಮತ್ತು ಅಸೂಯೆಯಿಲ್ಲದೆ ಆಚರಿಸುವ ಹಬ್ಬವೆ ಹೋಳಿ ಹಬ್ಬ ನಮ್ಮ ಎಲ್ಲಾ ಹಬ್ಬಗಳಲ್ಲಿ ಪ್ರಕೃತಿಗು ಮನುಷ್ಯನಿಗು ಅವಿನಾಭಾವ ಸಂಬಂಧವಿದ್ದು, ಹೋಳಿ ಹಬ್ಬವನ್ನು ವಸಂತಕಾಲದ ಆಗಮನ ಮತ್ತು ಹೊಸ ಜೀವ ಅರಳುವಿಕೆಯ ಎಂದು ಮಾತನಾಡಿದರು.

 

ಮಲ್ಲಿಕಾರ್ಜುನ ತರುಣ ಸಂಘದ ಅಧ್ಯಕ್ಷ ಶಿವರಾಜ ಅಂಡಗಿ ಅಧ್ಯಕ್ಷತೆ ವಹಿಸಿದರು. ವಿದ್ಯಾನಗರ ವೆಲ್‍ಫೇರ ಸೊಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಖಜಾಂಚಿ ಗುರುಲಿಂಗಯ್ಯ ಮಠಪತಿ, ತರುಣ ಸಂಘದ ಉಪಾಧ್ಯಕ್ಷ ವಿರೇಶ ನಾಗಶೆಟ್ಟಿ, ಕಾರ್ಯದರ್ಶಿ ಕರಣ ಆಂದೋಲ ವೇದಿಕೆ ಮೇಲೆ ಉಪಸ್ಥಿತರಿದ್ದರು.

 

ಕರಣ ಆಂದೋಲಾ ಸ್ವಾಗತಿಸಿದರು, ಡಾ. ಗುರುರಾಜ ಮುಗಳಿ ನಿರೂಪಿಸಿದರು, ಗುರುಲಿಂಗಯ್ಯ ಮಠಪತಿ ವಂದಿಸಿದರು.

ನಂತರ ಕಾಮದಹನ ಕಾರ್ಯಕ್ರಮ ಜರುಗಿತು ಬಿ.ಎನ್. ಪುಣ್ಯಶೆಟ್ಟಿ, ಕಾಶಿನಾಥ ಚಿನಮಳ್ಳಿ, ಶಾಂತಯ್ಯ ಬೀದಿಮನಿ, ಆದಪ್ಪ ಸಿಕೇದ, ನಾಗಭೂಷಣ ಹಿಂದೊಡ್ಡಿ, ನಾಗರಾಜ ಹೆಬ್ಬಾಳ, ಕಲ್ಯಾಣಪ್ಪ ಮುತ್ತಾ, ವಿಶ್ವನಾಥ ರಟಕಲ್, ವಿನೋದಕುಮಾರ ಜನೆವರಿ, ಶಿವಲಿಂಗಪ್ಪ ಅಷ್ಠಗಿ, ಗುರು ಮಂಠಾಳೆ, ಡಾ.ಸಂತೋಷ ಪಾಟೀಲ, ಅನೀಲಕುಮಾರ ನಾಗೂರೆ, ಸುನೀಲ ಮುತ್ತಾ, ವಿನೋದ ಪಾಟೀಲ, ಸಂತೋಷ ಪ್ಯಾಟಿ, ಅಮಿತ ಸಿಕೇದ, ಹರ್ಷ ಸಂಗಶೆಟ್ಟಿ, ಲಿಂಗರಾಜ ಕಾಳೆ, ಅಭಿಷೇಕ ದಸ್ಮಾ ಹಾಗೂ ತರುಣ ಸಂಘದ ಸದಸ್ಯರು ಉಪಸ್ಥಿತರಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments