ಕಲಬುರಗಿ: ಚಿತ್ತಾಪುರ ತಾಲೂಕಿನ ಇವಣಿ- ಗುಂಡಗುರ್ತಿ ರಸ್ತೆ ಮಧ್ಯೆ ಟಿಪ್ಪರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ಮುಖಂಡ ಓರ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಮವರ ಮಧ್ಯಾಹ್ನ ನಡೆದಿದೆ.
ಶಹಾಬಾದ್ ನಿವಾಸಿಯಾಗಿರುವ ಮಲ್ಲಿನಾಥ ಮರೇಪ್ಪ ಸಿಂಘೆ (40) ಮೃತಪಟ್ಟ ದುರ್ದೈವಿ. ಕೊಡ್ಲಾದಿಂದ ಕಲಬುರಗಿಗೆ ಬರುವಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಮಾಡಬೂಳ ಪೊಲೀಸ್ ಠಾಣೆಯ ಪಿಎಸ್’ಐ ಅಮೋಜ ಕಾಂಬ್ಳೆ, ಸಿಬ್ಬಂದಿಗಳಾದ ಶಿವಶರಣಯ್ಯ, ವೀರಶೆಟ್ಟಿ, ಕಮಲಾಕರ್, ಸಂತೋಷ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.