Google search engine
ಮನೆಕಲ್ಯಾಣ ಕರ್ನಾಟಕಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರ ಪ್ರೋಫೈಲ್

ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರ ಪ್ರೋಫೈಲ್

ಕಲಬುರಗಿ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರ ಪ್ರೋಫೈಲ್.

ಜನನ : 16 ನೇ ಸೆಪ್ಟೆಂಬರ್ 1960, ಗುಂಡಗುರ್ತಿ ಗ್ರಾಮ, ಚಿತ್ತಾಪುರ ತಾಲೂಕು, ಜಿಲ್ಲಾ ಕಲಬುರಗಿ.

ತಂದೆ : ರಾಜೇಂದ್ರಪ್ಪ

ತಾಯಿ: ಶಿವಮ್ಮ

ಕುಟುಂಬದ ವೃತ್ತಿ : ಕೃಷಿ.

ರಾಜಕೀಯ ಹಿನ್ನೆಲೆ : ರಾಧಾಕೃಷ್ಣ ಅವರ ತಂದೆ ರಾಜೇಂದ್ರಪ್ಪ ಅವರು ಅತ್ಯಂತ ಗೌರವಯುತ ವ್ಯಕ್ತಿಯಾಗಿದ್ದರು. 1960 ರ ದಶಕದಲ್ಲಿ ಎರಡು ಸಲ ತಾಲೂಕು ಅಭಿವೃದ್ದಿ ಮಂಡಳಿಯ ಸದಸ್ಯರಾಗಿ ಸೇವೆ. ರಾಧಾಕೃಷ್ಣ ಅವರು ಕೃಷಿಕ, ಶಿಕ್ಷಣ ಪ್ರೇಮಿ, ಉದ್ಯಮಿ ಹಾಗೂ ಉದಾರವಾದಿಯಾಗಿ ಗುರುತಿಸಿಕೊಂಡಿದ್ದಾರೆ.

ಶೈಕ್ಷಣಿಕ ಹಿನ್ನೆಲೆ : ಪ್ರಾಥಮಿಕ ಹಾಗೂ ಹೈಸ್ಕೂಲು- ವಿಜಯ ವಿದ್ಯಾಲಯ ಹಾಗೂ ಸೇಂಟ್ ಅಲೋಷಿಯಸ್, ಕಲಬುರಗಿ.

ಪಿಯುಸಿ : ಸೇಂಟ್ ಜೋಸೆಫ್ ಕಾಲೇಜು, ಬೆಂಗಳೂರು.

ಕೌಟುಂಬಿಕ ಹಿನ್ನೆಲೆ : ಹಿರಿಯ ನಾಯಕ ಹಾಗೂ ಧೀಮಂತ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರ ಹಿರಿಯ ಪುತ್ರಿ ಡಾ ಜಯಶ್ರೀ ಅವರೊಂದಿಗೆ ವಿವಾಹವಾಗಿರುವ ರಾಧಾಕೃಷ್ಣ ಅವರಿಗೆ ಪ್ರಾರ್ಥನಾ ಎನ್ನುವ ಓರ್ವ ಪುತ್ರಿ ಇದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ನ್ಯಾಷನಲ್ ಲಾ ಕಾಲೇಜಿನಲ್ಲಿ ಕಾನೂನು ಪದವಿಧರರಾಗಿರುವ ಪ್ರಾರ್ಥನಾ ಅವರು ವಕೀಲರಾಗಿ ಕೆಲಸ ಮಾಡುತ್ತಿದ್ದಾರೆ.

ಉದ್ಯಮಿ : ಬೆಂಗಳೂರಿನಲ್ಲಿ ಎಲ್ ಪಿ ಜಿ ಗ್ಯಾಸ್ ವಿತರಕರಾಗಿ ಉದ್ಯಮ ರಂಗಕ್ಕೆ ಪಾದಾರ್ಪಣೆ ಮಾಡಿ ಯಶಸ್ವಿಯಾದರು. ನಂತರ ಇವರ ಬದ್ಧತೆ ಹಾಗೂ ಸೇವಾ ಮನೋಭಾವದಿಂದಾಗಿ ಕರ್ನಾಟಕ ವಲಯದ ಎಲ್ ಪಿ ಜಿ ವಿತರಕರ ಸಂಘದ ಅಧ್ಯಕ್ಷರಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಶಿಕ್ಷಣ ಪ್ರೇಮಿ : ಶೈಕ್ಷಣಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕ‌ ಭಾಗದಲ್ಲಿ ಹಲವಾರು ಶಾಲೆ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಶೈಕ್ಷಣಿಕ ಸೇವೆ ಆರಂಭಿಸಿದರು. ಟ್ರಸ್ಟ್ ಹಾಗೂ ಸಂಘಗಳ ಮೂಲಕ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆಗೆ ಸಹಾಯ ಮಾಡುವ ಮೂಲಕ ಮಹತ್ತರ ಪಾತ್ರ ನಿರ್ವಹಿಸಿದರು. ಕಾಮೆಡ್ ಕೆ ಮೂಲಕ ಹಾಗೂ ಆರ್ಟಿಕಲ್ 371 J ಅಡಿಯಲ್ಲಿ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಪದವಿ ಪಡೆಯಲು ಬಡ ಹಾಗೂ ಆರ್ಥಿಕ ವಾಗಿ ಹಿಂದುಳಿದ ಕುಟುಂಬದಿಂದ ಬಂದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಮೂಲಕ ಅವರ ಕನಸು ಸಾಕಾರಗೊಳ್ಳಲು ಶ್ರಮವಹಿಸು ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಜನಾನುರಾಗಿಯಾದರು.

Contact Your\’s Advertisement; 9538528244

ಕ್ರೀಡಾಸಕ್ತಿ : ಯಶಸ್ವಿ ಉದ್ಯಮಿ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಹಲವಾರು ಮೈಲುಗಲ್ಲು ಸ್ಥಾಪನೆ ಮಾಡುವುದರ ಜೊತೆಗೆ ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದರಿಂದ ಕ್ರೀಡಾ ಕ್ಷೇತ್ರಕ್ಕೂ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡರು. ಕರ್ನಾಟಕ ಟೆನ್ನಿಸ್ ಅಸೋಷಿಯೇಷನ್ ಅಧ್ಯಕ್ಷರಾಗಿ 2021 ರವರೆಗೆ ಸೇವೆ ಸಲ್ಲಿಸಿದ್ದಾರೆ. ಕಲಬುರಗಿಯಲ್ಲಿ ಟೆನ್ನಿಸ್ ಸ್ಟೇಡಿಯಂ ಸ್ಥಾಪನೆಗೆ ಶ್ರಮವಹಿಸಿದ್ದರು. ಈ ತರಹದ ಸ್ಟೇಡಿಯಂ ಹೊಂದಿದ ಕಲಬುರಗಿ ದೇಶದ ಮೊದಲ 2 ಟೈರ್ ಸಿಟಿಯಾಗಿದೆ. 2005 ರಲ್ಲಿ ನಡೆದ ಚಾಲೆಂಜರ್ಸ್ ಟ್ರೋಫಿಯಲ್ಲಿ ಹೆಸರಾಂತ ವಿದೇಶಿ ಆಟಗಾರರು ಭಾಗವಹಿಸಿದ್ದು ನಗರದ ಹೆಮ್ಮೆಯಾಗಿದೆ.

ಸಂಗೀತ ಕ್ಷೇತ್ರ: ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದು ಕ್ಷೇತ್ರದ ಗಮನಾರ್ಹ ಬೆಳವಣಿಗೆಗೆ ಶ್ರಮವಹಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಚೌಡಯ್ಯ ಮೇಮೋರಿಯಲ್ ಹಾಲ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನಾಗರಿಕರ ಹಿತರಕ್ಷಣೆ : ನಾಗರಿಕರ ಹಿತರಕ್ಷಣೆ ಹಾಗೂ ಸಂಘ ಸಂಸ್ಥೆಗಳ ಹಿತ ಕಾಪಾಡುವ ಮನೋಭಾವನೆ ಇರುವುದರಿಂದಾಗಿ ಕಾಮೆಡ್ ಕೆ, ಟೆನ್ನಿಸ್ ಅಸೋಷಿಯೇಷನ್, ಚೌಡಯ್ಯ ಮೆಮೋರಿಯಲ್ ಹಾಲ್ ಮುಂತಾದ ಪ್ರತಿಷ್ಠಿಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಲು ಅವರನ್ನು ಅವ್ಹಾನಿಸಲಾಗಿದೆ.

ರಾಜಕೀಯ ಹಿನ್ನೆಲೆ: ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ರಾಜಕೀಯಕ್ಕೆ ಬಂದ ಯುವಕ ರಾಧಾಕೃಷ್ಣ ಅವರು ಕಳೆದ 35 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದು ತಮ್ಮ ಉದಾರಗುಣ ಹಾಗೂ ಸೇವೆ ಮಾಡುವ ಪ್ರವೃತ್ತಿಯಿಂದಾಗಿ ಜನರ ಪ್ರಶಂಸೆಗೆ ಒಳಗಾಗಿದ್ದಾರೆ.

1989 ರಿಂದಲೂ ಕಾಂಗ್ರೆಸ್ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತರಂತೆ ಕೆಲಸ ಮಾಡಿ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ನಡೆದ ಪ್ರತಿ ಚುನಾವಣೆಯಲ್ಲಿಯೂ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವ ಮೂಲಕ ಅವರ ಗೆಲುವಿಗೆ ಅವಿರತವಾಗಿ ಶ್ರಮಿಸಿದ್ದಾರೆ. ಮಿತಭಾಷೆ ಹಾಗೂ ತಮ್ಮ ಪ್ರಬುಧ್ದ ನಿಲುವಿನಿಂದಾಗಿ ಪಂಚಾಯತಿಯಿಂದ ಪಾರ್ಲಿಮೆಂಟ್ ವರೆಗಿನ ಎಲ್ಲಾ ಹಂತದ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಅಚ್ಚುಮೆಚ್ಚಿನ ನಾಯಕರಾಗಿ ಹೊರಹೊಮ್ಮಿದ್ದಾರೆ.

ಕಳೆದ 35 ವರ್ಷದಿಂದ ಸಾರ್ವಜನಿಕ ಜೀವನದಲ್ಲಿದ್ದುಕೊಂಡು ತಮ್ಮ ಉದಾರ ಹಾಗೂ ಪರೋಪಕಾರ ಪ್ರವೃತ್ತಿ ಹೊಂದಿದ್ದರಿಂದ ಅವಿಭಜಿತ ಕಲಬುರಗಿ ಜಿಲ್ಲೆಯ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಾಗ ತಕ್ಷಣಕ್ಕೆ ಅವರ ನೆರವಿಗೆ ಧಾವಿಸುತ್ತಿರುವುದರಿಂದಾಗಿ ಯಾವುದೇ ಸಮಸ್ಯೆ ಬಂದರೂ ರಾಧಾಕೃಷ್ಣ ತಮಗೆ ಸಹಾಯ ಮಾಡುತ್ತಾರೆ ಎಂದು ಜನಸಾಮಾನ್ಯರು ಅಭಿಪ್ರಾಯ ಹೊಂದಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ : ಕಳೆದ 35 ವರ್ಷದಿಂದ ನಿಸ್ವಾರ್ಥತೆಯಿಂದ ಯಾವುದೇ ಹುದ್ದೆಯನ್ನೂ ನಿರೀಕ್ಷಿಸದೆ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಂತೆ ದುಡಿದಿರುವ ರಾಧಾಕೃಷ್ಣ ಅವರ ಬದ್ಧತೆ, ಪಕ್ಷ ನಿಷ್ಠ, ಜನಪರ ಕಾಳಜಿ, ಸಾರ್ವಜನಿಕ ಕ್ಷೇತ್ರದ ಗಣನೀಯ ಸೇವೆಯನ್ನು ಪರಿಗಣಿಸಿ ಕಾಂಗ್ರೆಸ್ ಪಕ್ಷ ಅವರನ್ನು ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.

ಪಕ್ಷ ನಿಷ್ಠೆ ಹಾಗೂ ಬದ್ಧತೆ ಹಾಗೂ ಸಿದ್ದಾಂತಗಳನ್ನು ಗಮನಿಸಿ ಪಕ್ಷದ ಕಾರ್ಯಕರ್ತರು, ವಿಧಾನ ಸಭೆ ಮತ್ತು ವಿಧಾನಪರಿಷತ್ ಸದಸ್ಯರು ರಾಧಾಕೃಷ್ಣ ಅವರು ಅಭ್ಯರ್ಥಿಯಾಗಿರುವುದಕ್ಕೆ ಮುಕ್ತ ಮನಸಿನಿಂದ ಒಪ್ಪಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments