Google search engine
ಮನೆಕಲ್ಯಾಣ ಕರ್ನಾಟಕರಾಮನ ಹೆಸರನ್ನು ಚುನಾವಣೆಗೆ ಬಳಸುವುದು ಮಹಾ ಅವಮಾನ: ಪ್ರಿಯಾಂಕ್ ಖರ್ಗೆ

ರಾಮನ ಹೆಸರನ್ನು ಚುನಾವಣೆಗೆ ಬಳಸುವುದು ಮಹಾ ಅವಮಾನ: ಪ್ರಿಯಾಂಕ್ ಖರ್ಗೆ

ಕಲಬುರ್ಗಿ: ವಚನ ಭ್ರಷ್ಟರು ವಚನ ಪರಿಪಾಲಕ ರಾಮನ ಹೆಸರನ್ನು ಚುನಾವಣೆಗೆ ಬಳ ಸುವುದು ರಾಮನಿಗೆ ಮಾಡುವ ಮಹಾ ಅವಮಾನ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕಿಚಾಯಿಸಿದ್ದರೆ.

10 ವರ್ಷಗಳ ಹಿಂದೆ ಭವಿಷ್ಯ ಕಾಲದ ಕನಸುಗಳನ್ನು ಬಿತ್ತಿ ಮತ ಕೇಳಿದ್ದರು, ಈಗ 10 ವರ್ಷ ಕಳೆದ ನಂತರ ಭೂತ ಕಾಲದ ವಿಷಯಗಳ ಮೇಲೆ ಮತ ಕೇಳುತ್ತಿದ್ದಾರೆ.

ಈ ಭವಿಷ್ಯದಿಂದ ಭೂತಕಾಲದ ರಾಜಕೀಯದ ನಡುವಿನ 10 ವರ್ಷ ಯಾವುದೇ ಸಾಧನೆಯು ಇಲ್ಲದೆ ಆಡಳಿತ ನಡೆಸಿದರು.

10 ವರ್ಷಗಳ ಆಡಳಿತದ ನಂತರವೂ ಅಚ್ಚೆ ದಿನಗಳ ಭರವಸೆ ಈಡೇರಲಿಲ್ಲ, ವಾರ್ಷಿಕ 2 ಕೋಟಿ ಉದ್ಯೋಗ ಸಿಗಲಿಲ್ಲ, ಆರ್ಥಿಕ ಸಮಾನತೆ ಬರಲಿಲ್ಲ, ಬೆಲೆ ಏರಿಕೆ ಪರಿಹಾರ ಸಿಗಲಿಲ್ಲ, ರೂಪಾಯಿ ಮೌಲ್ಯ ಕಾಣಲಿಲ್ಲ, ರೈತರ ಆದಾಯ ಡಬಲ್ ಆಗಲಿಲ್ಲ, ಸ್ವಿಸ್ ಬ್ಯಾಂಕ್ ಮಾಹಿತಿ ತರುತ್ತೇವೆ ಅಂದವರು SBI ಬ್ಯಾಂಕ್ ಮಾಹಿತಿಯನ್ನ ಮುಚ್ಚಿಡು ತ್ತಿದ್ದಾರೆ.

ವಚನ ಭ್ರಷ್ಟರು ವಚನ ಪರಿಪಾಲಕ ರಾಮನ ಹೆಸರನ್ನು ಚುನಾವಣೆಗೆ ಬಳ ಸುವುದು ರಾಮನಿಗೆ ಮಾಡುವ ಮಹಾ ಅವಮಾನ ಎಂದು ಟೀಕಿಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments