ಕಲಬುರಗಿ: ಜೆಡಿಎಸ್ ಬಿಜೆಪಿ ಒಂದಾಗಿದ್ದಾರೆ ಎಂದು ನಾನು ಪೆಪರ್ ನಲ್ಲಿ ಓದಿದ್ದಾನೆ. ಪ್ರಧಾನಿ ನರೇಂದ್ರ ಮೋದಿ ಮತ್ತು ದೇವೆಗೌಡರು ಕೈಕೈ ಮಿಲಾಯಿಸಿದ್ದು ಸಹ ಪೇಪರ್ ನಲ್ಲಿ ನೋಡಿದ್ದೇನೆ. ಬಹುಶಾ ಅವರು ಒಂದಾಗಬೇಕೆಂದು ಪ್ರಯತ್ನ ಮಾಡುತ್ತಿದ್ದಾರೆ. ಅವರು ಯಾವ ಲೇಕಚ್ಚಾರ ಎಚ್ಟು ಸೀಟ್ ಗಳ ಆಧಾರದಲ್ಲಿ ಒಂದಾಗುತ್ತಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ ಹೇಳಿದರು.
ಶನಿವಾರ ಕಲಬುರಗಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೆಡಿಎಸ್ ಮೊದಲಿನಿಂದ ಸೆಕ್ಯೂಲರ್ ಎಂದು ಹೆಸರು ಇಟುಕೊಂಡಿದೆ. ಈಗ ಐಡಿಯಾಲೋಜಿ ಜೆಂಜ್ ಮಾಡಿಕೊಳ್ಳುತ್ತಿದ್ದಾರೆ ನೀವು ಮಾಡಿಕೊಳ್ಳಬೇಡಿ ಎಂದು ನಾವು ಹೇಳಕಾಗುತ್ತಾ. ಅವರು ಯಾವ ಯಾವ ವಿಷಯದಲ್ಲಿ ಒಂದಾಗಿದ್ದಾರೆ ಎಂಬುದನ್ನು ಅವರೇ ಹೇಳಬೇಕು ನಾನಲ್ಲ ಎಂದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲಬುರಗಿ ದಕ್ಷಣಿ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ಶರಣು ಮೋದಿ ಸೇರಿದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.