ಸಿನೆಮಾ ಎನ್ನುವುದು ಒಂದು ತಂಡದ ಕೆಲಸವೇ ಹೊರತು. ಒಬ್ಬನ-ಇಬ್ಬರ ಕೆಲಸವಲ್ಲ. ನಿರ್ದೇಶಕನ ತಾಳಕ್ಕೆ ನಟ, ನಟಿ, ತಂತ್ರಜ್ಞರು ಕುಣಿದರೆ ಮಾತ್ರ ಅತ್ಯುತ್ತಮ ಸಿನೆಮಾ ಮೂಡಿಬರಲು ಸಾಧ್ಯ ಎಂಬುದಕ್ಕೆ ಗಿರಿನಾಡ್ ಪ್ರೇಮಿ ಸಿನೆಮಾ ನಮ್ಮೆದುರಿಗೆ ಉದಾಹರಣೆಯಾಗಿ ನಿಂತಿದೆ.
ಹೌದು, ಯಾದಗಿರಿ ಸೀಮೆಯ ನೈಜಕತೆಯಾದಾರಿತ ಸಿನೆಮಾ ಇದಾಗಿದ್ದು, ಉತ್ತರ ಕನ್ನಡ ಭಾಷೆಯ ಶೈಲಿ, ವಿನೂತನ ಸಾಹಸದ ಮೂಲಕ ಸಿನಿ ರಸಿಕರ ಮನಗೆಲ್ಲುತ್ತಿದೆ. ಭಾರಿ ಗಾತ್ರದ ಬಜೆಟ್, ಖ್ಯಾತ ನಟರು ಇಲ್ಲದೆ ಹೋದರು ಯಾದಗಿರಿ ಜಿಲ್ಲೆಯ ಯುವಜನರ ಬದುಕು ಜೀವನ ಮತ್ತು ಯಶಸ್ಸನ್ನು ಅತ್ಯುತಮÀ ನಟನೆ ಮತ್ತು ಸಂಗೀತ, ಭಾಷೆ ಮತ್ತು ನಿರ್ದೇಶನ, ಕ್ಯಾಮೆರಾ ವರ್ಕ್ ನೋಡಿದರೆ ದೊಡ್ಡ ಗಾತ್ರದ ಸಿನೆಮಾಗಿಂತ ಕಡಿಮೆಯೇನು ಇಲ್ಲವೆಂದನಿಸದೆ ಇರದು.ಸಿನಿಮಾದಲ್ಲಿ ಪ್ರೇಮಿಗಳಿಬ್ಬರ ಪ್ರೀತಿಯನ್ನು ಕ್ಲೆöÊಮೆಕ್ಸ್ ವರೆಗೆ ಜೀವಂತವಾಗಿ ಕಾಪಾಡಿಕೊಂಡು, ಪ್ರತಿ ನೋಡುಗರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತದೆ. ಅಲ್ಲದೇ ಈ ಸಿನಿಮಾ ಯಾದಗಿರಿ ಕಲಬುರಗಿ ಮತ್ತು ಗ್ರಾಮೀಣ ಭಾಗದ ಯುವ ಜನರ ಚೊಚಲ ಪ್ರೀತಿಯ ಕುರುಹುಗಳು ಮನಸ್ಸಿಗೆ ತಟ್ಟುವ ರೀತಿಯಲ್ಲಿ ಸಿನೆಮಾದ ಹೆಚ್ಚುಗಾರಿಕೆಯಾ ಆಗಿದೆ.