ಆಳಂದ:ತಾಲ್ಲೂಕಿನ ಗಡಿಗ್ರಾಮ ಅಳಂಗಾ ಗ್ರಾಮದಲ್ಲಿ ಶುಕ್ರವಾರ ಆಳಂದ ತಾಲ್ಲೂಕು ಪಂಚಾಯಿತಿ ಹಾಗೂ ಅಳಂಗಾ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಲೋಕಸಭಾ ಚುನಾವಣೆ ಅಂಗವಾಗಿ ಮತದಾರರ ಜಾಗೃತಿ ಮೂಡಿಸುವ ಎಸ್ ವಿ ಇಇಪಿ ಕಾರ್ಯಕ್ರಮ ಜರುಗಿತು.
ತಾಪಂ ಇಒ ಚಂದ್ರಶೇಖರ ಪವಾರ ಮಾತನಾಡಿ ಪುಜಾವುಭುತ್ವದ ಯಶಸ್ಸಿಗಾಗಿ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು, ಯೋಗ್ಯ ಅಭ್ಯರ್ಥಿಯ ಆಯ್ಕೆ ಹಾಗೂ ಯಾವದೇ ಆಮಿಷಗಳಿಗೆ ಒಳಗಾಗದೇ ತಮ್ಮ ಮತದಾನದ ಹಕ್ಕು, ಸದುಪಯೋಗ ವಡಸಿಕೊಳ್ಳಲು ತಿಳಿಸಿದರು.ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರೀತಿ ರಡ್ಡಿ ಅವರು ಮತದಾರರಿಗೆ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮ ಅಧಿಕಾರಿಗಳಾದ ಸಮಜಯಕುಮಾರ ನಂದಗಾಂವ, ದೀಪಕ ಕುಮಾರ, ವಿನೋಧ, ರಾಜಕುಮಾರ ಮಾನಿಂಗ ಉಪಸ್ಥಿತರಿದ್ದರು, ಅಳಂಗಾ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಸಂಘ ಸಂಸ್ಥೆಯ ಸದಸ್ಯೆಯರು ಪಾಲ್ಗೊಂಡು ಗ್ರಾಮದ ಪುಮುಖ ಬೀದಿಗಳ ಮೂಲಕ ಮನೆ ಮನೆಗೆ ತೆರಳಿ ಮತದಾನದ ಹಕ್ಕು ಕುರಿತು ಜಾಗೃತಿ ಮೂಡಿಸಲಾಯಿತು.