Google search engine
ಮನೆಅಂತರಾಷ್ಟ್ರೀಯಕ್ರೀಡೆIPL 2024: ಐಪಿಎಲ್ ಸಂಪೂರ್ಣ ವೇಳಾಪಟ್ಟಿ ಪ್ರಕಟ.. ಮೇ 26ಕ್ಕೆ ಚೆನ್ನೈ ನಲ್ಲಿ ಫೈನಲ್

ಕ್ರೀಡೆIPL 2024: ಐಪಿಎಲ್ ಸಂಪೂರ್ಣ ವೇಳಾಪಟ್ಟಿ ಪ್ರಕಟ.. ಮೇ 26ಕ್ಕೆ ಚೆನ್ನೈ ನಲ್ಲಿ ಫೈನಲ್

ಮುಂಬಯಿ: IPL 2024 ಋತುವಿನ 2 ನೇ ಹಂತದ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಇಂದು ಬಿಡುಗಡೆ ಮಾಡಿದೆ. ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಈ ಹಿಂದೆ ಮೊದಲಾರ್ಧದ ಐಪಿಎಲ್​ನ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿತ್ತು ಅದರ ಮುಂದುವರೆದ ಭಾಗವಾಗಿ ಇಂದು 74 ಪಂದ್ಯಗಳ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಇದರೊಂದಿಗೆ ಮೇ 26ರ ಭಾನುವಾರದಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ.
ಐಪಿಎಲ್ 2024 ರ ಕ್ವಾಲಿಫೈಯರ್ 1 ಮೇ 21 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದರೆ, ಎಲಿಮಿನೇಟರ್ ಪಂದ್ಯ ಕೂಡ ಮೇ 22 ರಂದು ಇದೇ ಮೈದಾನದಲ್ಲಿ ಅಂದರೆ ಅಹಮದಾಬಾದ್‌ನಲ್ಲಿ ನಡೆಯಲಿದೆ. ಎರಡನೇ ಕ್ವಾಲಿಫೈಯರ್ ಪಂದ್ಯ ಮೇ 24 ರಂದು ಚೆನ್ನೈನಲ್ಲಿ ನಡೆಯಲಿದೆ.
ಮೊದಲ ವೇಳಾಪಟ್ಟಿಯಲ್ಲಿ ಮಾರ್ಚ್​ 22 ರಿಂದ ಏಪ್ರಿಲ್ 7 ರವರೆಗಿನ ವೇಳಾಪಟ್ಟಿ ಪ್ರಕಟವಾಗಿತ್ತು, ಎರಡನೇ ಹಂತದ ವೇಳಾಪಟ್ಟಿಯಂತೆ ಮೊದಲ ಪಂದ್ಯಾಟ ಏಪ್ರಿಲ್ ೮ ರಂದು ಆರಂಭವಾಗಲಿದ್ದು ಅದರಂತೆ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ನಡೆಯಲಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments