Google search engine
ಮನೆಕಲ್ಯಾಣ ಕರ್ನಾಟಕ‘ಮರಳಿ ಬಾ ಮನ್ವಂತರವೇ’ ಚಿತ್ರದಲ್ಲಿ ಬಿಸಿಲ ನಾಡಿನ ಸುಂದರಿ ಸುಲಕ್ಷಾ ಕೈರಾ

‘ಮರಳಿ ಬಾ ಮನ್ವಂತರವೇ’ ಚಿತ್ರದಲ್ಲಿ ಬಿಸಿಲ ನಾಡಿನ ಸುಂದರಿ ಸುಲಕ್ಷಾ ಕೈರಾ

ಸುಲಕ್ಷ ಕೈರಾ ಕನ್ನಡ ಚಿತ್ರರಂಗದ ಭರವಸೆಯ ಯುವ ನಾಯಕಿ. ಕರ್ನಾಟಕ ರಾಜ್ಯದ ಶಿಖರ ಪ್ರಾಯವಾದ ಗಡಿನಾಡು ಬೀದರ್ ಜಿಲ್ಲೆಯ ಕೊಡುಗೆಯಾಗಿರುವ ಸುಲಕ್ಷ ಕೈರಾ, ಓದಿದ್ದು ಎಂಎಸ್ಸಿ ಗಣಿತ ಶಾಸ್ತ್ರ. ಪದವಿ ಓದುವ ದಿನಗಳಲ್ಲೆ, ಪಠ್ಯಕ್ಕೆ ಪೂರಕವಾದ ಕೋರ್ಸ್ ಕಲಿಯಲು ರಾಜಧಾನಿ ಸೇರಿದ ಸುಲಕ್ಷ ಕೈರಾ ಸ್ನೇಹಿತರ ಒತ್ತಾಸೆಯ ಮೇರೆಗೆ ಅಕಸ್ಮಿಕವಾಗಿ ಸಿನಿಮಾ ರಂಗಕ್ಕೆ ಪ್ರವೇಶ ಪಡೆದರು. ಚಂದನವನದಲ್ಲಿ ಸದಭಿರುಚಿಯ ಚಿತ್ರಗಳ ಅಭಿನೇತ್ರಿಯಾಗಿ ಉಳಿಯುವ ಮಹತ್ವಾಕಾಂಕ್ಷೆ ಹೊಂದಿರುವ ಸುಲಕ್ಷ ಕೈರಾ ಅಭಿನಯವನ್ನು ಸೀರಿಯಸ್ ಆಗಿ ಪರಿಗಣಿಸಿದ್ದಾರೆ. ಪಾತ್ರದ ಆಯ್ಕೆ ಮತ್ತು ತಯಾರಿ ಅವರನ್ನು ಚಂದನವನದ ಭರವಸೆಯ ತಾರೆಯಾಗಿ ರೂಪಿಸುತ್ತಿದೆ.

ತೆಲುಗು-ಕನ್ನಡ ಭಾಷೆಗಳಲ್ಲಿ ತಯಾರಾದ ಹಾರರ್ ಥ್ರಿಲ್ಲರ್ ‘ಸೇಡು’ ಇವರ ಮೊದಲ ಚಲನಚಿತ್ರ. ಇದು ಹಿಂದಿ, ತಮಿಳು ಮತ್ತು ಬಾಂಗ್ಲಾ ಭಾಷೆಗಳಿಗೆ ಡಬ್ಬಿಂಗ್ ಆಗಿ ಪ್ರದರ್ಶನ ಯಶಸ್ಸು ಕಂಡಿದೆ. ಸಧ್ಯ ಚಂದನವನದಲ್ಲಿ ತಯಾರಾಗುತ್ತಿರುವ ‘ಅಕ್ಕ ಮಹಾದೇವಿ’ ಚಲನಚಿತ್ರದಲ್ಲಿಯೂ ಅಕ್ಕ ಮಹಾದೇವಿಯಾಗಿ ನಟಿಸುತ್ತಿದ್ದಾರೆ. ಇವರ ಅಭಿನಯದ ಸ್ನೇಹಿತ ಕನ್ನಡ ಚಲನಚಿತ್ರ 50ದಿನಗಳ ಯಶಸ್ವಿ ಪ್ರದರ್ಶನಗೊಂಡು ಚಿತ್ರ ರಸಿಕರ ಅಭಿಮಾನ ಗಳಿಸಿದ್ದಾರೆ.

Contact Your\’s Advertisement; 9538528244

ಕನ್ನಡ-ತಮಿಳು-ತೆಲುಗು ಚಿತ್ರಗಳಲ್ಲಿ ನಟಿಸುತ್ತಿರುವ ಸುಲಕ್ಷ ಕೈರಾ ತ್ರಿಭಾಷಾ ತಾರೆಯಾಗಿ ಗುರುತಿಸಿ ಕೊಂಡಿದ್ದಾರೆ. ಕಾರ್ಪೋರೇಟ್ ಜಾಹಿರಾತುಗಳಲ್ಲಿ, ಸಾಮಾಜಿಕ ಸಂದೇಶ ಬೀರುವ ಮಾದರಿ ಚಿತ್ರಗಳಲ್ಲಿ ಅಭಿನಯಿಸಿರುವ ಅವರು, ಈಗ ಚಂದನವನದ ಬಹು ನಿರೀಕ್ಷೆಯ ಕಾದಂಬರಿ ಆಧಾರಿತ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹಾಗೂ ಪತ್ರಕರ್ತ ಅರಕಲಗೂಡು ಜಯಕುಮಾರ್ ಚೊಚ್ಚಲ ನಿರ್ದೆಶನದ ‘ ಮರಳಿ ಭಾ ಮನ್ವಂತರವೇ…’ ಮಹಿಳಾ ಪ್ರದಾನ ಚಲನಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಕಾದಂಬರಿ ಆದರಿಸಿದ ಚಲನಚಿತ್ರಗಳ ಕೊರತೆ ಇರುವ ಹೊತ್ತಿನಲ್ಲಿಯೇ ಲಿಂಗ ತಾರತಮ್ಯ ಹಾಗೂ ಜಾತಿ ಎಳೆಯು ಸೂಕ್ಷ್ಮತೆಯನ್ನು ಹೊಂದಿದೆ. ಈ ಚಿತ್ರದ ಪಾತ್ರಕ್ಕಾಗಿ ಶ್ರದ್ದೆ ವಹಿಸಿರುವ ಸುಲಕ್ಷಾ ಕೈರಾ ಬೇರಾವುದೇ ಚಿತ್ರಗಳನ್ನು ಒಪ್ಪಿಕೊಳ್ಳದೇ, ಎಲ್ಲ ಷೆಡ್ಯೂಲ್ ಗಳನ್ನು ಮುಂದೂಡಿ ಈ ಚಿತ್ರಕ್ಕಾಗಿ ತಯಾರಿ ನಡೆಸಿದ್ದರು. ಇಡೀ ಸಿನಿಮಾ ನಾಯಕಿಯ ಮೇಲೆ ಕೇಂದ್ರೀಕೃತ ವಾಗಿರುವುದರಿಂದ ತಕ್ಕುದಾದ ಅಭಿನಯ ಪೂರ್ವ ಸಿದ್ದತೆಯೊಂದಿಗೆ ಅಡಿ ಇಟ್ಟಿದ್ದರು.

ಚಿತ್ರೀಕರಣ ಅಂದು ಕೊಂಡಂತೆ ಮುಗಿದಿದೆ, ಸುಲಕ್ಷಾ ಕೈರಾ ಅವರ ಅಭಿನಯ ನಿರೀಕ್ಷೆಯಂತೆ ಮೂಡಿ ಬಂದಿದೆ. ಈ ಸಿನಿಮಾ ಅವರ ವೃತ್ತಿ ಜೀವನದ ಮೈಲಿಗಲ್ಲಾಗ ಬಹುದು ಎಂದು ನಿರ್ದೇಶಕ ಅರಕಲಗೂಡು ಜಯಕುಮಾರ್ ತಿಳಿಸಿದ್ದಾರೆ. ಮರಳಿ ಬಾ ಮನ್ವಂತರವೇ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಹಾಡುಗಳ ಚಿತ್ರೀಕರಣ ಬಾಕಿ ಇದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಬಹಳ ದಿನಗಳ ನಂತರ ಚಂದನವನದಲ್ಲಿ ಹೊಸಬರ ತಂಡ ಪ್ರೆಶ್ ನೆಸ್ ನೊಂದಿಗೆ ‘ಮರಳಿ ಬಾ ಮನ್ವಂತರವೇ’ ಚಲನಚಿತ್ರ ತೆರೆಗೆ ಬರಲು ಸಿದ್ದವಾಗುತ್ತಿದೆ. ಪಂಕಜಾ ವಿಜೇಂದ್ರ ಬರೆದಿರುವ ಕೃತಿ ಆಧರಿಸಿದ ಮರಳಿ ಬಾ ಮನ್ವಂತರವೇ ಚಿತ್ರವನ್ನು ಸುಪ್ರಧಾ ಫಿಲ್ಮ್ಸ್ ಲಾಂಛನದಲ್ಲಿ ವಿಜೇಂದ್ರ ಒಡೆಯರ್ ನಿರ್ಮಿಸುತ್ತಿದ್ದಾರೆ.

ಗೀತ ಸಾಹಿತ್ಯ ರೂಪಾ ಹಾಸನ, ರಾಮ್ ಗೋಪಾಲ್ ವರ್ಮಾ ತೆಲುಗು ಸಿನಿಮಾ ಇಂಡಸ್ಟ್ರಿಗೆ ಪರಿಚಯಿಸಿದ ಆನೆಂ ವೆಂಕಟರಾವ್ ಛಾಯಾಗ್ರಹಣ, ಅನಂತ್ ಆರ್ಯನ್ ಸಂಗೀತ, ಉದಯ್ ಜಗಳೂರು ಸಂಕಲನ, ನಿರ್ದೇಶನ ತಂಡದಲ್ಲಿ ಸಂಗಮೇಶ್ ಗದ್ದಿ, ಮಹೇಶ್ ಉಣಚಗೇರಿ ಹಾಗೂ ಸಾನಿಯಾ ಶಿವಮೊಗ್ಗ ಇದ್ದಾರೆ. ತಾರಾಗಣದಲ್ಲಿ ಆರ್ಯನ್ ,ಶ್ರೀ ಪರಿಣೀತಿ, ಮಯೂರ್, ಮೂಗು ಸುರೇಶ್, ಅಪೂರ್ವ ಸಿರಿ , ಬಾಲ ನಟಿ ರೀತು ಸಿಂಗ್, ಗೋಮಾರದನಹಳ್ಳಿ ಮಂಜುನಾಥ್, ಅಮೃತಾ, ಪ್ರಶಾಂತ್ ಮೇಟಿ, ಶಿವು ದಂಡಿನ್ ಮತ್ತಿತರರು ಇದ್ದಾರೆ. ಚಿತ್ರ ಶೀಘ್ರದಲ್ಲಿಯೇ ತೆರೆಗೆ ಬರಲಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments