ಸುರಪುರ:ನಗರದ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್‍ನಲ್ಲಿ ಕ್ರೈಸ್ತ ಬಾಂಧವರಿಂದ ಯೆಸ್ತು ಕ್ರಿಸ್ತನನ್ನು ಶಿಲುಭೆಗೇರಿಸಿದ ದಿನವಾದ ಶುಭ ಶುಕ್ರವಾರ (ಗುಡ್ ಫ್ರೈಡೆ) ದಿನವನ್ನು ಭಕ್ತಿ ಭಾವ ದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಕ್ರೈಸ್ತ ಸಮಾಜದ ಜಿಲ್ಲಾ ಮೇಲ್ವಿಚಾರಕರಾದ ರೆವÉರೆಂಡ್ ಎಸ್.ಸತ್ಯಮಿತ್ರ ಅವರು ಮಾತನಾಡಿ,ಸಪ್ತ ವಾಕ್ಯಗಳಲ್ಲಿ ಒಂದಾದ ತಂದೆಯೇ ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿ ಕೊಡುತ್ತೇನೆ ಎಂದು ದೈವ ಸಂದೇಶ ನೀಡಿ,ಜಗತ್ತಿನಲ್ಲಿ ಶಾಂತಿ ನೆಲೆಸಲು,ಯೇಶು ಕ್ರಿಸ್ತನು ಸಾರಿದ ಶಾಂತಿ ಸಂದೇಶ ಅವರ ತ್ಯಾಗ,ಪ್ರೀತಿ ಹಾಗೂ ಆದರ್ಶಗಳು ನಮ್ಮೆಲ್ಲರಿಗೆ ದಾರಿದೀಪವಾಗಿದೆ,ನಾವೆಲ್ಲರು ಆತನ ತ್ಯಾಗವನ್ನು ಸ್ಮರಿಸೋಣ ಎಂದರು.