ಗುಲ್ಬರ್ಗ ಜಿಲ್ಲೆಯಲ್ಲಿ ಬಿರುಸಿನಿಂದ ಚುನಾವಣಾ ಪ್ರಚಾರವು ಭರದಿಂದ ಸಾಗಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ನಿವೃತ್ತ ಪ್ರಾಧ್ಯಾಪಕರಾದ ಡಾ. ವಿ. ಟಿ. ಕಾಂಬಳೆ ಯವರಿಂದ ಹಾಗೂ ಪಕ್ಷದ ಇನ್ನಿತರ ಪ್ರಭಾವಿ ಕಾರ್ಯಕರ್ತರಿಂದ ಮನೆ ಮನೆಗೆ ತೆರಳಿ ಜನಸಾಮಾನ್ಯರ ಕಷ್ಟ ಸುಖಗಳನ್ನು ವಿಚಾರಿಸಿ ಅವರ ಭಾವನೆಗಳಿಗೆ ಸ್ಪಂದಿಸಿ ಮತಯಾಚಿಸುವ ಚುನಾವಣಾ ಪ್ರಚಾರವು ಬಿರುಸಿನಿಂದ ಸಾಗಿದೆ. ನೇರ ನಡೆನುಡಿಯ, ಸರಳ ಸಜ್ಜನಿಕೆಯ ವ್ಯಕ್ತಿತ್ವದ ಪ್ರೊ.ವಿ.ಟಿ. ಕಾಂಬ್ಳೆ ಅವರು ಪಕ್ಷದ ಕಾರ್ಯಕರ್ತರೊಂದಡ ಗೂಡಿ ಮನೆ ಮನೆಗೆ ಹೋಗುತ್ತಿದ್ದಂತೆ ಜನಸಾಮಾನ್ಯರು ತಮ್ಮ ಮನೆಯ ಒಬ್ಬ ಸದಸ್ಯರೇ ಆಗಮಿಸಿದಂತೆ ಅಷ್ಟೇ ಪ್ರೀತಿ ಮತ್ತು ಅಕ್ಕರೆಯಿಂದ ಅವರನ್ನು ಹಾಗೂ ಪಕ್ಷದ ಕಾರ್ಯಕರ್ತರನ್ನು ಸ್ವಾಗತಿಸಿ ಬರಮಾಡಿಕೊಂಡರು. ಲೋಕಸಭಾ ಚುನಾವಣೆಗೆ ಇನ್ನು ಎರಡೇ ದಿನ ಬಾಕಿ ಇದ್ದು ಮತ ಚಲಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ನಾಗರಿಕರು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಸಂವಿಧಾನದ ಮೂಲ ತತ್ವವನ್ನು ಗೌರವಿಸಬೇಕೆಂದು ಬಿಸಿಲು ಕೂಗು ಸುದ್ದಿ ಪತ್ರಿಕೆಯ ಪರವಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ.