ಡಾಕ್ಟರ ಅಂದ್ರ ಹ್ಯಾಂಗಿರಬೇಕು?
ಮಧುರ ಮಾತಿನ ಮದ್ದಿಗೆ
ರೋಗಿಯ ರೋಗ ವಾಸಿಯಾಗಿರಬೇಕು
ರೋಗಿಯ ಸಮಸ್ಯೆ ಆಲಿಸುವಾಗ
ಏಕಾಗ್ರತೆಯಿಂದ ಆಲಿಸಬೇಕು
ನಾಚಿಕೆ, ಹೇಸಿಕೆ ಮರೆತಿರಬೇಕು
ಸದಾ ನಗು ನಗುತಿರಬೇಕು
ರೋಗಿಯು ಹೇಳಿದ ಸಮಸ್ಯೆಗೆ
ನಾನಿದಿನಿ ಹೆದರಬೇಡ ಎಂದು ಧೈರ್ಯ ಹೇಳುವಂತಿರಬೇಕು
ಪ್ರತಿ ರೋಗಿಗೂ ಪ್ರಾಮಾಣಿಕವಾಗಿ ಚಿಕಿತ್ಸೆ ನೀಡುತ್ತಿರಬೇಕು
ಜಾತಿ ಭೇಧ ಪಕ್ಷ ಪಾತ ಮರೆತಿರಬೇಕು
ಜ್ಞಾನದ ಮತಿ ತುಂಬಿರಬೇಕು
ಚಿತ್ತದಿ ಚಿಕಿತ್ಸೆ ಮಾಡಿರಬೇಕು
ಸ್ವಾರ್ಥದ ಬದುಕು ಬಿಟ್ಟಿರಬೇಕು
ಹಬ್ಬ ಹುಣ್ಣಿಮೆಯೂ ಮರೆತಿರಬೇಕು
ಮನದಲ್ಲಿ ಮಮಕಾರ ತುಂಬಿರಬೇಕು
ಹಣದ ಹಪಾಪಿಗೆ ದೂರಿರಬೇಕು
ರೋಗಿಯ ಪಾಲಿಗೆ ದೇವರಂತಿರಬೇಕು
ರೋಗಿಗೆ ತಾನು ದೇವರೆನ್ನುತ್ತಿರಬೇಕು.
-ಡಾ.ಅವಿನಾಶ ದೇವನೂರ ಆಳಂದ ಮೊಸಂ 990285 2713