ಕಲಬುರಗಿ ಎಪ್ರಿಲ್ 26 : ಗುಲ್ಬರ್ಗ ವಿಶ್ವವಿದ್ಯಾಲಯವು ಲೈಬ್ರರಿ ಅಂಡ್ ಇಂಫಾರ್ಮೇಷನ್ ಸೈನ್ಸ್ ವಿಷಯದಲ್ಲಿ ಬಸಮ್ಮ ಅವರಿಗೆ ಪಿ ಎಚ್ ಡಿ ಪದವಿ ಪ್ರಕಟಿಸಿದೆ.
ಪ್ರೊ.ಡಾ. ವಿ.ಟಿ.ಕಾಂಬಳೆ ಯವರ ಮಾರ್ಗದರ್ಶನದಲ್ಲಿ” ಇನ್ಫಾರ್ಮಶನ್ ಸ್ಕಿಲ್ಸ್ ಅಂಡ್ ಸ್ಟ್ರೆಸ್ ಮ್ಯಾನೇಜ್ಮೆಂಟ್ ಅಮೊಂಗ್ ಡಿಗ್ರಿ ಕಾಲೇಜ್ ಲೈಬ್ರರೀಸ್ ಇನ್ ಕಲ್ಯಾಣ ಕರ್ನಾಟಕ ರೀಜಿನ್ : ಎ ಸ್ಟಡಿ ” ಕುರಿತು ಬಸಮ್ಮ ಅವರು ಪ್ರಬಂಧವನ್ನು ಮಂಡಿಸಿದ್ದರು. ಗುಲ್ಬರ್ಗ ವಿಶ್ವವಿದ್ಯಾಲಯವು ಅವರ ಈ ಪ್ರಬಂಧವನ್ನು ಪುರಸ್ಕರಿಸಿ ಪಿ ಎಚ್ ಡಿ ಪದವಿಯನ್ನು ನೀಡಿದೆ. ಅವರು ಇನ್ನು ಮುಂದೆ ಗ್ರಂಥಾಲಯದ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಸಮಾಜಕ್ಕೆ ಹೆಚ್ಚು ಹೆಚ್ಚಿನ ಸೇವೆಯನ್ನು ಕೊಡುಗೆಯನ್ನು ನೀಡುವಂತಾಗಲಿ ಎಂದು ಬಿಸಿಲು ಕೂಗು ಸುದ್ದಿ ಪತ್ರಿಕೆಯ ವಿ.ಟಿ.ಫೌಂಡೇಶನ್ ನ ಸಂಸ್ಥಾಪಕರಾದಂತಹ ಶ್ರೀ ಡಾ. ವಿ.ಟಿ.ಕಾಂಬಳೆ ಯವರು ಹಾಗೂ ಸಂಪಾದಕರು ಮತ್ತು ಪತ್ರಕರ್ತರಾದ ಡಾ.ಮಾಲವಿಕಾ ರವರು ಶುಭಕೋರುತ್ತಿದ್ದಾರೆ.