Google search engine
ಮನೆಬಿಸಿ ಬಿಸಿ ಸುದ್ದಿಮಹಿಳಾ ಮತದಾರರ ಕೇಂದ್ರ ಬಿಂದು ಸಖಿ ಪಿಂಕ್ ಬೂತ್ ಗಳು

ಮಹಿಳಾ ಮತದಾರರ ಕೇಂದ್ರ ಬಿಂದು ಸಖಿ ಪಿಂಕ್ ಬೂತ್ ಗಳು

*ಮಹಿಳಾ ಮತದಾರರ ಕೇಂದ್ರಬಿಂದು ಸಖಿ ಪಿಂಖ್ ಬೂತ್‍ಗಳು:*

*ಮಹಿಳೆಯರೇ ಮತ ಚಲಾಯಿಸಲು ಮುಂದೆ ಬನ್ನಿ, ಇದೋ ನಿಮಗೆ ಸ್ವಾಗತ*

ಕಲಬುರಗಿ,ಮೇ.6(ಕ.ವಾ.) ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಮತ್ತು ವಿಶೇಷವಾಗಿ ಮಹಿಳಾ ಮತದಾರರನ್ನು ಮತಗಟ್ಟೆಯತ್ತ ಆಕರ್ಷಿಸಲು ಜಿಲ್ಲೆಯಾದ್ಯಂತ ಸಖಿ ಪಿಂಕ್ ಬೂತ್ ಸ್ಥಾಪಿಸಲಾಗಿದ್ದು, ಮಹಿಳಾ ಮತದಾರರನ್ನು ಸ್ವಾಗತಿಸಲು ಸಜ್ಜಾಗಿ ನಿಂತಿವೆ.

ಮಹಿಳಾ ಮತದಾರರೆ ಹೆಚ್ಚಿರುವ ಸಖಿ ಪಿಂಕ್ ಬೂತ್‍ನಲ್ಲಿ ಮತಗಟ್ಟೆ ಅಧಿಕಾರಿಯಿಂದ ಹಿಡಿದು ಮತಗಟ್ಟೆ ಸಹಾಯಕಿ, ಕಾವಲು ಸಿಬ್ಬಂದಿ ಎಲ್ಲರು ಮಹಿಳೆಯರೇ ಆಗಿರಲಿದ್ದಾರೆ. ಸಂಪೂರ್ಣ ಮತಗಟ್ಟೆ ಮಹಿಳಾ ಸಿಬ್ಬಂದಿಯಿಂದ ನಿರ್ವಹಣೆಗೆ ಒಳಪಟ್ಟಿದ್ದು, ಎಲ್ಲವು ಮಹಿಳಾಮಯವಾಗಿರಲಿದೆ. ಜಿಲ್ಲೆಯಲ್ಲಿ 9 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 5 ರಂತೆ ಸಖಿ ಪಿಂಕ್ ಬೂತ್‍ಗಳಿದ್ದು, ಸುಮಾರು 180 ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಗುಲಾಬಿ ಬಣ್ಣದ ಸೀರೆಯಲ್ಲಿ ಮಹಿಳಾ ಸಿಬ್ಬಂದಿ ಕಂಗೊಳಿಸಿದರೆ, ಮತಗಟ್ಟೆ ಕಟ್ಟಡವು ಪಿಂಕ್ ಬಣ್ಣದಿಂದ ಮತದಾರರನ್ನು ತನ್ನತ್ತ ಆಕರ್ಷಿಸಲಿದೆ.

ಅಫಜಲಪುರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಅಫಜಲಪುರ ಸರ್ಕಾರಿ ಎಮ್.ಜಿ.ಪಿ. ಶಾಲೆ ಮತಗಟ್ಟೆ ಸಂಖ್ಯೆ-161, ಅಫಜಲಪುರ ಸರ್ಕಾರಿ ಉರ್ದು ಹೆಚ್.ಪಿ.ಎಸ್. ಹೆಚ್.ಕೆ.ಡಿ.ಬಿ. ಮತಗಟ್ಟೆ ಸಂಖ್ಯೆ-164, ಅಫಜಲಪುರ ತೋಟಗಾರಿಕೆ ಕಚೇರಿ ಮತಗಟ್ಟೆ ಸಂಖ್ಯೆ 170, ನದಿಸಿನ್ನೂರ ಸರ್ಕಾರಿ ಪ್ರೌಢಶಾಲೆ ಮತಗಟ್ಟೆ ಸಂಖ್ಯೆ 170, ಫೀರೋಜಾಬಾದ ಗ್ರಾಮ ಪಂಚಾಯತ್ ಮತಗಟ್ಟೆ ಸಂಖ್ಯೆ 244 ರಲ್ಲಿ ಸ್ಥಾಪಿಸಿದೆ.

ಜೇವರ್ಗಿ ಮತಕ್ಷೇತ್ರ ವ್ಯಾಪ್ತಿಗೆ ಸೇರಿದ ಜೇವರ್ಗಿ (ಬಿ) ಸರ್ಕಾರಿ ಗಲ್ರ್ಸ್ ಹೆಚ್.ಪಿ.ಎಸ್. ಬಿಲ್ಡಿಂಗ್ ಮತಗಟ್ಟೆ ಸಂಖ್ಯೆ 89, ಮದರಿ ಸರ್ಕಾರಿ ಹೆಚ್.ಪಿ.ಎಸ್. ಬಿಲ್ಡಿಂಗ್ ಮತಗಟ್ಟೆ ಸಂಖ್ಯೆ 108, ಚಿಗರಳ್ಳಿ ಸರ್ಕಾರಿ ಎಲ್.ಪಿ.ಎಸ್. ಬಿಲ್ಡಿಂಗ್ ಮತಗಟ್ಟೆ ಸಂಖ್ಯೆ 180, ಇಜೇರಿ ಸರ್ಕಾರಿ ಹೆಚ್.ಎಸ್. ನ್ಯೂ ಬಿಲ್ಡಿಂಗ್ ಮತಗಟ್ಟೆ ಸಂಖ್ಯೆ 188 ಹಾಗೂ ಕೆಲ್ಲೂರ ಗ್ರಾಮ ಪಂಚಾಯತ್ ಆಫೀಸ್ ಬಿಲ್ಡಿಂಗ್ ಮತಗಟ್ಟೆ ಸಂಖ್ಯೆ 160 ರಲ್ಲಿ ಪಿಂಕ್ ಬೂತ್ ಸ್ಥಾಪಿಸಲಾಗಿದೆ.

ಚಿತ್ತಾಪುರ ಮತಕ್ಷೇತ್ರದಲ್ಲಿ ಕೋರವಾರ ಸರ್ಕಾರಿ ಹೈಯರ್ ಪ್ರೈಮೇರಿ ಸ್ಕೂಲ್ ಮತಗಟ್ಟೆ ಸಂಖ್ಯೆ 12, ದಂಡೋತಿ ಸರ್ಕಾರಿ ಉರ್ದು ಹೈಯರ್ ಪ್ರೈಮೇರಿ ಸ್ಕೂಲ್ ಮತಗಟ್ಟೆ ಸಂಖ್ಯೆ 48, ಚಿತ್ತಾಪುರ ಸರ್ಕಾರಿ ಲೋವರ್ ಪ್ರೈಮೇರಿ ಸ್ಕೂಲ್ ಮತಗಟ್ಟೆ ಸಂಖ್ಯೆ 76 ಹಾಗೂ ರೇವೂರ ಸರ್ಕಾರಿ ಉರ್ದು ಹೈಯರ್ ಪ್ರೈಮೇರಿ ಸ್ಕೂಲ್ ಮತಗಟ್ಟೆ ಸಂಖ್ಯೆ 112 ರಲ್ಲಿ ಪಿಂಕ್ ಬೂತ್ ಆಕರ್ಷಿಸಲಿವೆ.

ಸೇಡಂ ಮತಕ್ಷೇತ್ರದಲ್ಲಿ ನಿಡಗುಂದಾ ಗ್ರಾಮ ಪಂಚಾಯತ್ ಬಿಲ್ಡಿಂಗ್ ಮತಗಟ್ಟೆ ಸಂಖ್ಯೆ 40, ಸೇಡಂ ತುಳಜಾ ಭವಾನಿ ಶಿಶು ಮಂದಿರ ಮತಗಟ್ಟೆ ಸಂಖ್ಯೆ 96, ಸೇಡಂ ಹೌಸಿಂಗ್ ಬೋರ್ಡ್ ಸರ್ಕಾರಿ ಹೆಚ್.ಪಿ.ಎಸ್. ಸ್ಕೂಲ್ ಮತಗಟ್ಟೆ ಸಂಖ್ಯೆ 121, ರಂಜೋಳ ಸರ್ಕಾರಿ ಹೆಚ್.ಪಿ.ಎಸ್. ಶಾಲೆ ಮತಗಟ್ಟೆ ಸಂಖ್ಯೆ 163 ಹಾಗೂ ಮುಧೋಳ ಸರ್ಕಾರಿ ಗಲ್ಸ್ ಹೈಸ್ಕೂಲ್ ಮತಗಟ್ಟೆ ಸಂಖ್ಯೆ 182 ರಲ್ಲಿ ಮಹಿಳಾ ಬೂತ್ ಸ್ಥಾಪಿಸಿದೆ.

ಚಿಂಚೋಳಿ ಮತಕ್ಷೇತ್ರದಲ್ಲಿ (ಕಾಳಗಿ) ಕೆರಿಕಾಳ ತಾಂಡಾದ ಸರ್ಕಾರಿ ಎಲ್‍ಪಿಎಸ್ ಬಿಲ್ಡಿಂಗ್ ಮತಗಟ್ಟೆ ಸಂಖ್ಯೆ 220, ಕಲ್ಲೂರ ರಸ್ತೆಯ ಸರ್ಕಾರಿ ಹೆಚ್.ಪಿ.ಎಸ್. ಓಲ್ಡ್ ಬಿಲ್ಡಿಂಗ್ ಮತಗಟ್ಟೆ ಸಂಖ್ಯೆ 184, ಚಂದಾಪುರ ಸರ್ಕಾರಿ ಹೆಚ್‍ಪಿಎಸ್ ಉರ್ದು ಮತಗಟ್ಟೆ ಸಂಖ್ಯೆ 134, ಚಿಂಚೋಳಿ ವಿವೇಕ ವಿದ್ಯಾಲಯ ಮಂದಿರ ಬಿಲ್ಡಿಂಗ್ ಮತಗಟ್ಟೆ ಸಂಖ್ಯೆ 123 ಹಾಗೂ ಚಿಮ್ಮ ಇದ್ಲಾಯಿ ಸರ್ಕಾರಿ ಹೆಚ್‍ಪಿಎಸ್ ಬಿಲ್ಡಿಂಗ್ ಮತಗಟ್ಟೆ ಸಂಖ್ಯೆ 141 ಸ್ಥಾಪಿಸಲಾಗಿದೆ.

ಗುಲಬರ್ಗಾ ಗ್ರಾಮೀಣ ಮತಕ್ಷೇತ್ರಕ್ಕೆ ಒಳಪಡುವ ಕಮಲಾಪುರ ಪಟ್ಟಣ ಪಂಚಾಯತ್ ಕಚೇರಿ ಮತಗಟ್ಟೆ ಸಂಖ್ಯೆ 76, ಮಹಾಗಾಂವ ಗ್ರಾಮ ಪಂಚಾಯತ್ ಕಚೇರಿ ಮತಗಟ್ಟೆ ಸಂಖ್ಯೆ 105, ಹಾಗರಗಾ ಸರ್ಕಾರಿ ಹೈಯರ್ ಪ್ರೈಮೇರಿ ಸ್ಕೂಲ್ ಮತಗಟ್ಟೆ ಸಂಖ್ಯೆ 188, ಶಹಾಬಾದ ಹನುಮಾನ ನಗರದ ಸರ್ಕಾರಿ ಬಾಲಕರ ಹಾಸ್ಟೇಲ್ (ನ್ಯೂ ಬಿಲ್ಡಿಂಗ್) ಮತಗಟ್ಟೆ ಸಂಖ್ಯೆ 244 ಹಾಗೂ ಶಹಾಬಾದ ಗಂಜ್ ಪ್ರದೇಶದ ಸರ್ಕಾರಿ ಮಹಿಳಾ ಪ್ರಾಥಮಿಕ ಶಾಲೆ ಉರ್ದು ವಿಭಾಗ ಮತಗಟ್ಟೆ ಸಂಖ್ಯೆ 270 ರಲ್ಲಿ ಮಹಿಳಾ ಬೂತ್ ಇರಲಿದೆ.

ಗುಲಬರ್ಗಾ ದಕ್ಷಿಣ ಮತಕ್ಷೇತ್ರಕ್ಕೆ ಸೇರುವ ಕಲಬುರಗಿ ಹೀರಾಪುರ ಇಕ್ಬಾಲ್ ಕಾಲೋನಿಯ ಹುಸೇನಿ ಗಾರ್ಡನದಲ್ಲಿನ ಹುಸೇನಿ ಪಬ್ಲಿಕ್ ಇಂಗ್ಲೀಷ್ ಹಾಗೂ ಕನ್ನಡ ಮಿಡಿಯಮ್ ಶಾಲೆ ಮತಗಟ್ಟೆ ಸಂಖ್ಯೆ 46, ಕಲಬುರಗಿ ಜಿಲಾನಾಬಾದ್ ಮದಿನಾ ಕಾಲೋನಿಯ ಸರ್ಕಾರಿ ಉರ್ದು ಲೋಯರ್ ಪ್ರೈಮೇರಿ ಶಾಲೆ ಮತಗಟ್ಟೆ ಸಂಖ್ಯೆ 108, ಕಲಬುರಗಿ ಬ್ರಹ್ಮಪುರ ಜಿಲಾನಾಬಾದ್ ಸರ್ಕಾರಿ ಮಾಡೆಲ್ ಪ್ರೈಮೇರಿ ಶಾಲೆ ಮತಗಟ್ಟೆ ಸಂಖ್ಯೆ 110, ಕಲಬುರಗಿ ಸಂಗಮೇಶ್ವರ ಕಾಲೋನಿಯ ಡಾ. ಪಾಂಡುರಂಗರಾವ್ ಪಟಕಿ ಮೆಮೋರಿಯಲ್ ನೂತನ ವಿದ್ಯಾಲಯ ಕನ್ಯ ಲಾಲ್ ಮಾಲು ಕಾಮರ್ಸ್ ಕಾಲೇಜು ಮತಗಟ್ಟೆ ಸಂಖ್ಯೆ 132 ಹಾಗೂ ಜಗತ್ ಸರ್ಕಾರಿ ಹೈಯರ್ ಪ್ರೈಮೇರಿ ಸ್ಕೂಲ್ ಬಿಲ್ಡಿಂಗ್ ಮತಗಟ್ಟೆ ಸಂಖ್ಯೆ 155 ರಲ್ಲಿ ಮಹಿಳಾ ಬೂತ್ ತಲೆ ಎತ್ತಿವೆ.

ಇನ್ನೂ ಗುಲಬರ್ಗಾ ಉತ್ತರ ಮತಕ್ಷೇತ್ರದಲ್ಲಿ ಕಲಬುರಗಿ ರಾಜೀವ ಗಾಂಧಿ ನಗರದ ದೇವಜಿ ನಾಯಕ್ ಶಾಲೆಯ ಮುಂಭಾಗದಲ್ಲಿರುವ ಕಮ್ಯೂನಿಟಿ ಹಾಲ್ ಮತಗಟ್ಟೆ ಸಂಖ್ಯೆ 97, ಕಲಬುರಗಿ ರೋಜಾ ಇಸ್ಲಾಮಾಬಾದ್ ಕಾಲೋನಿಯ ಕೆ.ಸಿ.ಟಿ. ಪಾಲಿಟೆಕ್ನಿಕ್ ಕಾಲೇಜು ಸ್ಟೋರ್ ರೂಮ್ ಮತಗಟ್ಟೆ ಸಂಖ್ಯೆ 107, ಕಲಬುರಗಿ ರೋಜಾ ಖಾಜಾ ಕಾಲೋನಿಯ ಕ್ರಿಸೆಂಟ್ ಪಬ್ಲಿಕ್ ಇಂಗ್ಲೀಷ್ ಮೀಡಿಯಮ್ ಪಬ್ಲಿಕ್ ಶಾಲೆ ಮತಗಟ್ಟೆ ಸಂಖ್ಯೆ 127, ಕಲಬುರಗಿ ಶಹಾಬಜಾರದ ಮಹಾಂತಪ್ಪ ಅಲ್ಲದ ಹೈಸ್ಕೂಲ್ ಮತಗಟ್ಟೆ ಸಂಖ್ಯೆ 170 ಹಾಗೂ ಕಲಬುರಗಿ ಜಮ್ ಜಮ್ ಕಾಲೋನಿಯ ಸಿಟಿ ಅಕಾಡೆಮಿಕ್ ಹೈಸ್ಕೂಲ್ ಮತಗಟ್ಟೆ ಸಂಖ್ಯೆ 227 ರಲ್ಲಿ ಸಹ ಪಿಂಕ್ ಬೂತ್ ಸ್ಥಾಪಿಸಲಾಗಿದೆ.

ಆಳಂದ ಮತಕ್ಷೇತ್ರದಲ್ಲಿ ಆಳಂದ ಬಲ್ಯಾನ್‍ಕೇರಿ ಸರ್ಕಾರಿ ಹೈಯರ್ ಪ್ರೈಮೇರಿ ಶಾಲೆ ಮತಗಟ್ಟೆ ಸಂಖ್ಯೆ 100, ಆಳಂದ ಕಲಬುರಗಿ ರಸ್ತೆಯ ಸರ್ಕಾರಿ ಡಿಗ್ರಿ ಕಾಲೇಜು ಮತಗಟ್ಟೆ ಸಂಖ್ಯೆ 98, ಆಳಂದ ಶರಣ ನಗರದ ಸರ್ಕಾರಿ ಹೆಚ್.ಪಿ.ಎಸ್. ಶಾಲೆ ಮತಗಟ್ಟೆ ಸಂಖ್ಯೆ 87, ಆಳಂದ ಹೆಚ್.ಪಿ.ಎಸ್. ಶ್ರೀ ಶ್ರೀ ಶ್ರೀ ಸಿದ್ದಲಿಂಗೇಶ್ವರ ಶಿವಾಚಾರ್ಯ ಹಿರೇಮಠ ಮತಗಟ್ಟೆ ಸಂಖ್ಯೆ 104 ಹಾಗೂ ಜಂಬಗಿ (ಜೆ) ಸರ್ಕಾರಿ ಹೈಯರ್ ಪ್ರೈಮೇರಿ ಶಾಲೆ ಮತಗಟ್ಟೆ ಸಂಖ್ಯೆ 137 ರಲ್ಲಿ ಸಖಿ ಪಿಂಕ್ ಬೂತ್ ಆಕರ್ಷಿಸಲಿವೆ.

*ಯುವ ಬೂತ್:*

ವಿಶೇಷವಾಗಿ ಮೊದಲನೇ ಬಾರಿಗೆ ಮತದ ಹಕ್ಕು ಚಲಾಯಿಸುವ ಯುವ ಮತದಾರರನ್ನು ಗುರಿಯಾಗಿಸಿ ಕ್ಷೇತ್ರಕ್ಕೊಂದು “ಯುವ ಬೂತ್” ಸ್ಥಾಪಿಸಲಾಗಿದ್ದು, ಅಫಜಲಪುರ ಮತಕ್ಷೇತ್ರದ ಗೂಡೂರ್ ಹೆಚ್.ಪಿ.ಎಸ್. ಶಾಲೆ ಮತಗಟ್ಟೆ ಸಂಖ್ಯೆ 8, ಜೇವರ್ಗಿ ಮತಕ್ಷೇತ್ರದ ಕಡಕೋಳ ಸರ್ಕಾರಿ ಮಾಡೆಲ್ ಪ್ರೈಮೇರಿ ಶಾಲೆ ಮತಗಟ್ಟೆ ಸಂಖ್ಯೆ 209, ಚಿತ್ತಾಪುರ ಮತಕ್ಷೇತ್ರದ ಮಾಡಬೂಳ ಸರ್ಕಾರಿ ಹೈಯರ್ ಪ್ರೈಮೇರಿ ಶಾಲೆ (ನ್ಯೂ ಬಿಲ್ಡಿಂಗ್) ಮತಗಟ್ಟೆ ಸಂಖ್ಯೆ 62, ಸೇಡಂ ಮತಕ್ಷೇತ್ರದ ಸ್ವಾಮಿ ವಿವೇಕಾನಂದ ಹೈಯರ್ ಪ್ರೈಮೇರಿ ಶಾಲೆ ಬಿಲ್ಡಿಂಗ್ ಮತಗಟ್ಟೆ ಸಂಖ್ಯೆ 120, ಚಿಂಚೋಳಿ ಮತಕ್ಷೇತ್ರದ ದಸ್ತಾಪುರ ಸರ್ಕಾರಿ ಲೋಯರ್ ಪ್ರೈಮೇರಿ ಶಾಲೆ ಬಿಲ್ಡಿಂಗ್ ಮತಗಟ್ಟೆ ಸಂಖ್ಯೆ 171, ಗುಲಬರ್ಗಾ ದಕ್ಷಿಣ ಮತಕ್ಷೇತ್ರದ ದಿನ್ಸಿ ತಾಂಡಾ ಸರ್ಕಾರಿ ಹೈಯರ್ ಪ್ರೈಮೇರಿ ಶಾಲೆ ಮತಗಟ್ಟೆ ಸಂಖ್ಯೆ 81, ಗುಲಬರ್ಗಾ ಉತ್ತರ ಮತಕ್ಷೇತ್ರದ ಹೀರಾಪುರ ಸರ್ಕಾರಿ ಹೈಯರ್ ಪ್ರೈಮೇರಿ ಶಾಲೆ ಮತಗಟ್ಟೆ ಸಂಖ್ಯೆ 36, ಗುಲಬರ್ಗಾ ದಕ್ಷಿಣ ಮತಕ್ಷೇತ್ರದ ಶಹಾಬಜಾರದ ಶೆಟ್ಟಿ ಸಂಗಪ್ಪ ಮೆಮೋರಿಯಲ್ ಇಂಗ್ಲೀಷ್ ಮೀಡಿಯಮ್ ಶಾಲೆ ಮತಗಟ್ಟೆ ಸಂಖ್ಯೆ 42 ಹಾಗೂ ಆಳಂದ ಮತಕ್ಷೇತ್ರದ ಸರ್ಕಾರಿ ಹೈಯರ್ ಪ್ರೈಮೇರಿ ಶಾಲೆ ಮತಗಟ್ಟೆ ಸಂಖ್ಯೆ 72 ರಲ್ಲಿ ಸ್ಥಾಪಿಸಿದೆ.

*ಪಿ.ಡಬ್ಲ್ಯೂ.ಡಿ. ಮತಗಟ್ಟೆ:*

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಅತೀ ಹೆಚ್ಚು ಅಂಗವಿಕಲರು ಇರುವಂತಹ ಪ್ರದೇಶದಲ್ಲಿ “ಪಿ.ಡಬ್ಲ್ಯೂ.ಡಿ.” ಮತಗಟ್ಟೆ ಸ್ಥಾಪಿಸಿ ಅಲ್ಲಿ ವಿಶೇಷ ಚೇತನರಿಗಾಗಿ ಮತ ಚಲಾಯಿಸಲು ಅನುಕೂಲವಾಗುವಂತೆ ರ್ಯಾಂಪ್, ವ್ಹೀಲ್ ಚೇರ್, ವೇಟಿಂಗ್, ನೆಳಿನ ವ್ಯವಸ್ಥೆ ಮಾಡಲಾಗಿದೆ. ಅಫಜಲಪುರ ಮತಕ್ಷೇತ್ರದ ಕುರಳಿ ಸರ್ಕಾರಿ ಹೆಚ್.ಪಿ.ಎಸ್. ಶಾಲೆ ಮತಗಟ್ಟೆ ಸಂಖ್ಯೆ 4, ಜೇವರ್ಗಿ ಮತಕ್ಷೇತ್ರದ ಕೂಕನೂರ್ ಸರ್ಕಾರಿ ಯುಪಿ ಗ್ರೇಟ್ ಹೈಯರ್ ಪ್ರೈಮೇರಿ ಶಾಲೆ ಮತಗಟ್ಟೆ ಸಂಖ್ಯೆ 154, ಚಿತ್ತಾಪುರ ಮತಕ್ಷೇತ್ರದ ನಾಲವಾರ ಸರ್ಕಾರಿ ಗಲ್ಸ್ ಹೈಯರ್ ಪ್ರೈಮೇರಿ ಶಾಲೆ ಮತಗಟ್ಟೆ ಸಂಖ್ಯೆ 208, ಸೇಡಂ ಮತಕ್ಷೇತ್ರದ ಮದನಾ 202-ಸರ್ಕಾರಿ ಹೈಯರ್ ಪ್ರೈಮೇರಿ ಶಾಲೆ ಬಿಲ್ಡಿಂಗ್ ಮತಗಟ್ಟೆ ಸಂಖ್ಯೆ 202, ಚಿಂಚೋಳಿ ಮತಕ್ಷೇತ್ರದ ಖುನ್ನಿ ತಾಂಡಾ ಸರ್ಕಾರಿ ಲೋಯರ್ ಪ್ರೈಮೇರಿ ಶಾಲೆ ಬಿಲ್ಡಿಂಗ್ ಮತಗಟ್ಟೆ ಸಂಖ್ಯೆ 84, ಗುಲಬರ್ಗಾ ಗ್ರಾಮೀಣ ಮತಕ್ಷೇತ್ರದ ತರನಳ್ಳಿ ಸರ್ಕಾರಿ ಹೈಯರ್ ಪ್ರೈಮೇರಿ ಶಾಲೆ ಮತಗಟ್ಟೆ ಸಂಖ್ಯೆ 235, ಗುಲಬರ್ಗಾ ದಕ್ಷಿಣ ಮತಕ್ಷೇತ್ರದ ಬ್ರಹ್ಮಪೂರ ಶರಣಬಸವೇಶ್ವರ ಆಟ್ರ್ಸ್ ಕಾಲೇಜು ಮತಗಟ್ಟೆ ಸಂಖ್ಯೆ 145, ಕಲಬುರಗಿ ಉತ್ತರ ಮತಕ್ಷೇತ್ರದ ಆಳಂದ ನಾಕಾ ತಾಜ್ ಕಾಲೇಜ್ ಆಫ್ ಎಜ್ಯುಕೇಶನ್ (ಪಿಯುಸಿ ದ್ವಿತೀಯ ವರ್ಷದ ಕ್ಲಾಸ್ ರೂಮ್) ಮತಗಟ್ಟೆ ಸಂಖ್ಯೆ 37 ಹಾಗೂ ಆಳಂದ ಮತಕ್ಷೇತ್ರದ ಕಡಗಂಚಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 201.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments