Google search engine
ಮನೆಕಲೆ-ಕ್ರೀಡೆನಾಟಕಗಳಿಂದ ಸಾಮಾಜಿಕ ಪರಿವರ್ತನೆ ಸಾಧ್ಯ

ನಾಟಕಗಳಿಂದ ಸಾಮಾಜಿಕ ಪರಿವರ್ತನೆ ಸಾಧ್ಯ

ನಾಟಕಗಳಿಂದ ಸಾಮಾಜಿಕ ಪರಿವರ್ತನೆ ಸಾಧ್ಯ

ಶಹಬಾದ: ನಾಟಕಗಳು ಸಮಾಜದಲ್ಲಿರುವ ವರದಕ್ಷಿಣೆ, ಭಯೋತ್ಪಾದನೆ, ಅನೀತಿ, ಶೋಷಣೆ, ಮೂಢನಂಬಿಕೆ, ಕಂದಾಚಾರ, ಅಂಧಶೃದ್ಧೆಯಂತಹ ಸಮಸ್ಯೆಗಳ ಪರಿಣಾಮ ಮತ್ತು ಪರಿಹಾರಗÀಳನ್ನು ಸಮಾಜಕ್ಕೆ ನೈಜವಾಗಿ ತೋರಿಸುವ ಮೂಲಕ ಜನಜಾಗೃತಿ ಮೂಡಿಸುತ್ತವೆ. ಮಾನವೀಯ ಮೌಲ್ಯಗಳಾದ ಸಂಸ್ಕಾರ, ಸತ್ಯ, ಶಾಂತಿ, ಪ್ರೀತಿ, ಬಾಂದವ್ಯ ವೃದ್ಧಿಗೆ ನಾಟಕಗಳು ಪೂರಕವಾಗಿ ಕಾರ್ಯನಿರ್ವಹಿಸುವ ಮೂಲಕ ಸಾಮಾಜಿಕ ಪರಿವರ್ತನೆ ಮಾಡುತ್ತಿವೆ ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಎಚ್. ಅಭಿಮತಪಟ್ಟರು.

ತಾಲೂಕಿನ ಸಮೀಪದ ನಂದೂರ(ಬಿ)ಯ ತೋಪಕಟ್ಟಿ ಹಿರೇಮಠದಲ್ಲಿ ‘ಕನ್ನಡ ಜಾನಪದ ಪರಿಷತ್’ ಜಿಲ್ಲಾ ಘಟಕ ಮತ್ತು ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಸಂಜೆ ಏರ್ಪಡಿಸಲಾಗಿದ್ದ ‘ವಿಶ್ವ ರಂಗಭೂಮಿ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ವಿಶೇಷ ಉಪನ್ಯಾಸ ನೀಡಿದ ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಪದವಿ ಕಾಲೇಜಿನ ಕನ್ನಡ ವಿಷಯದ ಸಹಾಯಕ ಪ್ರಾಧ್ಯಾಪಕ ಡಾ.ನಾಗರಾಜ ದಂಡೋತಿ ಹೆಬ್ಬಾಳ, ಉತ್ತರ ಕರ್ನಾಟಕ ರಂಗಭೂಮಿಯ ತವರೂರಿದ್ದಂತೆ. ವಿಶೇಷವಾಗಿ ದೇಶಿ ಭಾಷೆಯ ನಾಟಕಗಳು ನಮ್ಮಲ್ಲಿ ಕಂಡುಬರುತ್ತವೆ. ರಂಗಭೂಮಿಯು ಸಂಸ್ಕøತಿ, ಪರಂಪರೆ ಉಳಿಸಿ, ಬೆಳೆಸುತ್ತದೆ. ನಾಟಕ ರಚನೆ ಕಷ್ಟದ ಕೆಲಸವಾಗಿದ್ದು, ನಮ್ಮ ಭಾಗದ ರಂಗಭೂಮಿ ಸಾಹಿತಿಗಳಿಗೆ ಅಂತಹ ಕಷ್ಟದ ಕೆಲಸ ಸರಳವಾಗಿ ಮಾಡುವ ಕಲೆ ಕರಗತಮಾಡಿರುವುದೇ ವಿಶೇಷವಾಗಿದೆ ಎಂದರು.

ಹವ್ಯಾಸಿ ರಂಗಭೂಮಿ ಕಲಾವಿದ ಶಾಂತಕುಮಾರ ಪಾಟೀಲ ಮಾತನಾಡಿ, ರಂಗಭೂಮಿ ನೆಡದಾಡುವ ವಿಶ್ವವಿದ್ಯಾಲಯವಾಗಿದೆ. ವಾಸ್ತವ ಸ್ಥಿತಿಯನ್ನು ದೊಡ್ಡದು ಅಥವಾ ಚಿಕ್ಕದಾಗಿ ಹೇಳದೆ, ಇರುವುದನ್ನು, ಇರುವ ಹಾಗೆಯೇ ಹೇಳುವ ರಂಗಭೂಮಿ, ಸಮಾಜದ ನೈಜ ಪ್ರತಿಬಿಂಬವಾಗಿದೆ. ಆದ್ದರಿಂದ ರಂಗಭೂಮಿ ಕಲಾವಿದರಿಗೆ ಅವರಲ್ಲಿರುವ ಕಲೆಗೆ ಪ್ರೋತ್ಸಾಹ ನೀಡಿ ಬೆಳೆಸಿದರೆ ಮಾತ್ರ ರಂಗಭೂಮಿ ಕ್ಷೇತ್ರ, ಕಲೆಗಳು, ಕಲಾವಿದರು ಉಳಿಯಲು ಸಾಧ್ಯವಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮಠದ ಧರ್ಮಾಧಿಕಾರಿ ವೇದಮೂರ್ತಿ ಡಾ.ಗಂಗಾಧರ ಆರ್.ಹಿರೇಮಠ, ಪರಿಷತ್ ಜಿಲ್ಲಾಧ್ಯಕ್ಷ ಎಮ.ಬಿ.ನಿಂಗಪ್ಪ, ಬಳಗದ ಅಧ್ಯಕ್ಷ ಹಾಗೂ ಪರಿಷತ್ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಪಾಟೀಲ, ಸಂಘಟನಾ ಕಾರ್ಯದರ್ಶಿ ಸಾಯಬಣ್ಣ ಹೋಳ್ಕರ್, ಪ್ರಮುಖರಾದ ಬಸವರಾಜ ಜಿ.ಪಾಟೀಲ, ಚಂದ್ರಶೇಖರ ಎಸ್.ಪಾಟೀಲ, ಮಲ್ಲಿಕಾರ್ಜುನ ವಿ.ಖೇಣಿ, ಸೈಯಜ್ ಫಾಯಮ್ ಹುಸೇನ್, ಸಾತಲಿಂಗಪ್ಪ ಅಡಕಿ ಹಾಗೂ ಉಬಯ ನಂದೂರ ಗ್ರಾಮಸ್ಥರು ಭಾಗವಹಿಸಿದ್ದರು.

ರಂಗಭೂಮಿ ಕಲಾವಿದರಾದ ಗುರಪ್ಪ ಪಾಟೀಲ, ಮಲ್ಲಿಕಾರ್ಜುನ ಎನ್.ಬಿರಾದಾರ, ಮಲ್ಲಯ್ಯ ಎಂ.ಗುತ್ತೇದಾರ, ಶರಣಪ್ಪ ಡಿ.ಕಲ್ಲಾ, ನಜೀರಸಾಬ್ ಡಿ.ಮಲ್ಲಾಬಾದಿ ಅವರಿಗೆ ಸತ್ಕರಿಸಿ, ಗೌರವಿಸಲಾಯಿತು. ನಂತರ ಕಲಾ ಪ್ರದರ್ಶನ ಜರುಗಿತು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments