Google search engine
ಮನೆಕಲೆ-ಕ್ರೀಡೆಯುವಕ-ಯುವತಿಯರು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಕಠಿಣ ಪರಿಶ್ರಮ ಬೇಕು: ಕು.ಶ್ರೇಯಾಂಕಾ ಪಾಟೀಲ

ಯುವಕ-ಯುವತಿಯರು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಕಠಿಣ ಪರಿಶ್ರಮ ಬೇಕು: ಕು.ಶ್ರೇಯಾಂಕಾ ಪಾಟೀಲ

ಸಾಧನೆ ಮಾಡಲು 100% ಕಠಿಣ ಪರಿಶ್ರಮ ಹಾಕಬೇಕು. ಆಗ ಮಾತ್ರ ಗೆಲುವು ನಮ್ಮದಾಗುತ್ತದೆ

ಕಲಬುರಗಿ: ಇಂದಿನ ಯುವಕ-ಯುವತಿಯರು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು 100% ಕಠಿಣ ಪರಿಶ್ರಮ ಹಾಕಬೇಕು. ಆಗ ಮಾತ್ರ ಗೆಲುವು ನಮ್ಮದಾಗುತ್ತದೆ ಎಂದು ಟೀಮ್ ಇಂಡಿಯಾ ಆಟಗಾರ್ತಿ, ಕಲಬುರಗಿ ಕುವರಿ ಶ್ರೇಯಾಂಕಾ ಪಾಟೀಲ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿ, ಜೀವನದಲ್ಲಿ ಸೋಲು ಗೆಲುವು ಇದ್ದೆ, ಇರುತ್ತೆ ಅವುಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ರೂಡಿಸಿಕೊಳ್ಳಬೇಕು. Never Give Up Attitude ಮೂಲಕ ನೀವು ಕಂಡ ಕನಸನ್ನು ಸಾಕಾರಗೊಳಿಸಬೇಕು. ಆದರಿಂದ 100% ಪರಿಶ್ರಮ ಅಗತ್ಯ ಎಂದು ಸಲಹೆ ನೀಡಿದರು.

ನಾನು ಸಹ ನಿಮ್ಮ ವಯಸ್ಸಿನವಳೇ ಆಗಿದ್ದೇನೆ. ವಿರಾಟ್ ಕೊಹ್ಲಿಯಂತ ಶ್ರೇಷ್ಠ ಆಟಗಾರರನ್ನು ಭೇಟಿ ಮಾಡಿದ ಮೇಲೆ ಮನಸ್ಥಿತಿ ಬದಲಾಗಿ ಕ್ರಿಕೆಟ್ ನಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ನೀವೆಲ್ಲರೂ ನಿಮ್ಮ ಇಷ್ಟದ ಕ್ಷೇತ್ರವನ್ನು ಆಯ್ಕೆ ಮಾಡಿ ಅದರ ಮೇಲೆ ನಿರಂತರ ಶ್ರಮ ಹಾಕಿ ಎಂದು ಹೇಳಿದರು.

ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಮಾತನಾಡಿ, ಶ್ರೇಯಾಂಕಾ ಪಾಟೀಲ ಕೇವಲ ಕಲಬುರಗಿ ಅಷ್ಟೇ ಅಲ್ಲದೇ, ಇಡೀ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಅವರ ಕಠಿಣ ಶ್ರಮ, ಶಿಸ್ತು ಹಾಗೂ ಸಾಮರ್ಥ್ಯದಿಂದ ಇಂತಹ ಸಾಧನೆ ಮಾಡಲು ಸಾಧ್ಯವಾಗಿದೆ. ಶ್ರೇಯಾಂಕಾಗೆ ಪ್ರೋತ್ಸಾಹ ನೀಡಿದ ಅವರ ತಂದೆ-ತಾಯಿ ಸೇರಿ ಅವರ ಸಂಪೂರ್ಣ ಕುಟುಂಬದ ಬೆಂಬಲ ಅನನ್ಯ. ಅವರ ಈ ಸಾಧನೆಗೆ ಜಿಲ್ಲಾಡಳಿತ ವತಿಯಿಂದ ಗೌರವ ನೀಡಲಾಗುತ್ತಿದೆ ಎಂದರು.

ಶ್ರೇಯಾಂಕಾ ಪಾಟೀಲ್ ಅವರನ್ನು ಕಲಬುರಗಿ ಜಿಲ್ಲೆಯ ಯುವಕ-ಯುವತಿಯರು ಸ್ಫೂರ್ತಿ ಪಡೆದು ಕೇವಲ ಕ್ರೀಡೆಯಷ್ಟೇ ಅಲ್ಲದೇ, ಪ್ರತಿಯೊಂದು ಉನ್ನತ ಹುದ್ದೆಯಲ್ಲಿ ಕಲಬುರಗಿಯವರು ತಲುಪಬೇಕು. ಶ್ರೇಯಾಂಕಾ ಪಾಟೀಲ ಅವರು ಇನ್ನೂ ಹೆಚ್ಚಿನ ಸಾಧನೆ ಮಾಡಲಿ. ಅವರ ಶ್ರೇಯ ಮುಗಿಲೆತ್ತರಕ್ಕೆ ಏರಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ ಹಾಕೈ ಮಾತನಾಡಿ, ಶ್ರೇಯಾಂಕಾ ಪಾಟೀಲ ಅವರ ಸಾಧನೆ ನಮ್ಮಲ್ಲರಿಗೂ ಹೆಮ್ಮೆ ತಂದಿದೆ. ಕಲಬುರಗಿ ಅಲ್ಲದೇ, ಕರ್ನಾಟಕದ ಎಲ್ಲರಿಗೂ ಶ್ರೇಯಾಂಕಾ ಸಾಧನೆ ಮಾದರಿಯಾಗಿದೆ. ಸಾಧನೆಗೆ ಯಾವುದೇ, ಹಳ್ಳಿ, ಊರು ಎನ್ನುವ ಗಡಿ ಇಲ್ಲ. ಎಲ್ಲರಲ್ಲೂ ಸಾಧಿಸುವ ಸಾಮರ್ಥ್ಯವಿದೆ. ಭಯವೆಂಬ ಗ್ಲಾಸ್ ಸಿಲ್ಲಿಂಗ್ ಒಡೆಯುವ ಮೂಲಕ ನಿಮ್ಮ ನೆಚ್ಚಿನ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ನೀಡಬೇಕು. ಆ ನಿಟ್ಟಿನಲ್ಲಿ ಎಲ್ಲರು ಶ್ರೇಯಾಂಕಾ ಪಾಟೀಲ್ ಅವರನ್ನು ಸ್ಫೂರ್ತಿಯನ್ನಾಗಿ ತಿಳಿದು ನಿಮ್ಮ ಕನಸು ನನಸು ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರು ಸ್ವಾಗತಿಸಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್ ಅವರು ಶ್ರೇಯಾಂಕಾ ಪಾಟೀಲ ಪರಿಚಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಭಂವರ್ ಸಿಂಗ್ ಮೀನಾ, ಪಾಲಿಕೆ ಆಯುಕ್ತ ಭುವನೇಶ್ ದೇವಿದಾಸ್ ಪಾಟೀಲ್, ಶ್ರೇಯಾಂಕಾ ಪಾಟೀಲ್ ಅವರ ತಂದೆ ರಾಜೇಶ್ ಪಾಟೀಲ್, ತಾತ ಅಮೃತಗೌಡ ಪಾಟೀಲ್, ಕೋಚ್ ಅರ್ಜುನ್ ಸೇರಿ ಅನೇಕರು ಇದ್ದರು.

ಡಿಸಿ ಆಫೀಸ್ ನಲ್ಲಿ ಮೊಳಗಿದ ಆರ್.ಸಿ.ಬಿ ಘೋಷ:

ಬುಧವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಟೀಮ್ ಇಂಡಿಯಾ ಆಟಗಾರ್ತಿ, ಕಲಬುರಗಿ ಕುವರಿ ಶ್ರೇಯಾಂಕಾ ಪಾಟೀಲ್ ಅವರಿಗೆ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ನೇರದಿದ್ದ ವಿದ್ಯಾರ್ಥಿಗಳು ಶ್ರೇಯಾಂಕಾ ಅವರನ್ನು ಕಂಡು RCB RCB RCB ಎನ್ನುತ್ತಾ, ಈ ಸಲ ಕಪ್ ನಮ್ದೇ ಎಂದು ಜೈಘೋಷ ಕೂಗಿ ಸಂಭ್ರಮಿಸಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments