Google search engine
ಮನೆಕಲ್ಯಾಣ ಕರ್ನಾಟಕಬಿಜೆಪಿಯ ಚುನಾವಣಾ ಜಾಹಿರಾತಿನಲ್ಲಿ ಮಹಿಳೆಯರಿಗೆ ಅವಮಾನ: ಆಯೋಗಕ್ಕೆ ದೂರು

ಬಿಜೆಪಿಯ ಚುನಾವಣಾ ಜಾಹಿರಾತಿನಲ್ಲಿ ಮಹಿಳೆಯರಿಗೆ ಅವಮಾನ: ಆಯೋಗಕ್ಕೆ ದೂರು

ಕಿತ್ತಾಡುವ ದೃಶ್ಯಗಳು ಇದ್ದು ಮತ್ತು ಕೊನೆಯಲ್ಲಿ ಮೋದಿಯವರನ್ನು ತೋರಿಸಲಾಗಿದೆ

ಕಲಬುರಗಿ: ಬಿಜೆಪಿ ಚುನಾವಣಾ ಜಾಹಿರಾತಿನಲ್ಲಿ ಮಹಿಳೆಯರಿಗೆ ಅಪಮಾನ ಮಾಡುವಂತಹ ಬಳಸಿರುವುದನ್ನು ಖಂಡಿಸಿ, ಈ ಜಾಹಿರಾತನ್ನು ಕೂಡಲೇ ರದ್ದುಗೊಳಿಸಿ ದೇಶದ ಜನತೆಗೆ ಕ್ಷಮೆ ಕೇಳಬೇಕೆಂದು ಒತ್ತಾಯಿಸಿ ಸಿಪಿಐಎಂ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಆಗ್ರಹಿಸಿದ್ದಾರೆ.

ಬುಧವಾರ ನಗರದ ಚುನಾವಣಾಧಿಕಾರಿಗಳಿಗೆ ದೂರು ನೀಡಿದ ಅವರು ಬಿಜೆಪಿ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಅತ್ಯಂತ ಕೀಳು ಮಟ್ಟದ ಜಾಹಿರಾತುಗಳನ್ನು ಮಾಡುವ, ಸುಳ್ಳನ್ನು ಪ್ರಚಾರಗೊಳಿಸುವ, ಜನರನ್ನು ಭಾವೋದ್ರೇಕಗೊಳಿಸುವ, ಮತೀಯ ಪ್ರಚೋದನಾತ್ಮಕ ಸಂಗತಿಗಳನ್ನು ಮುನ್ನೆಲೆಗೆ ತರುವ ಮುಂತಾದ ಅಸಂವೈಧಾನಿಕ ಕೃತ್ಯಕ್ಕೆ ಇಳಿದಿದೆ ಎಂದು ಅವರು ತಿಳಿಸಿದ್ದಾರೆ.

ಬಿಜೆಪಿಯು ಚುನಾವಣಾ ಪ್ರಚಾರದ ಜಾಹೀರಾತಿನಲ್ಲಿ ವಧು ವೇಷದ ಮಹಿಳೆಯನ್ನು ಸುತ್ತುವರಿದು ವರನಾಗುವ ಸ್ಪರ್ಧೆ ನಡೆಯುವಂತಹ ಕಿತ್ತಾಡುವ ದೃಶ್ಯಗಳು ಇದ್ದು ಮತ್ತು ಕೊನೆಯಲ್ಲಿ ಮೋದಿಯವರನ್ನು ತೋರಿಸಲಾಗಿದೆ. ಬಿಜೆಪಿಯು ಚುನಾವಣೆಯಲ್ಲಿ ಗೆಲ್ಲಲು ಮಹಿಳೆಯರಿಗೆ ಅಪಮಾನ ಮಾಡುವಂತಹ ಜಾಹಿರಾತು ಬಳಸಿರುವುದು ಆ ಪಕ್ಷದ ಮಹಿಳಾ ವಿರೋಧಿ ನಡೆಯನ್ನು ಜಗಜ್ಜಾಹಿರುಗೊಳಿಸಿದಂತಾಗಿದೆ ಎಂದಿದ್ದಾರೆ.

ವ್ಯಕ್ತಿಯ ಘನತೆಯನ್ನು ಎತ್ತಿ ಹಿಡಿಯುವ ಸಂವಿಧಾನದ ಆಶಯವನ್ನು ಉಲ್ಲಂಘಿಸಿದೆ ಬಿಜೆಪಿ. ಚುನಾವನಾ ಆಯೋಗ ಕೂಡಲೇ ದೇಶದ ಮಹಿಳೆಯರನ್ನು ಹೀಗೆ ಅಪಮಾನಿಗೊಳಿಸಿದ ಮತ್ತು ಮಹಿಳೆಯರ ಆಯ್ಕೆಯ ಹಕ್ಕಿನ ಧಾಳಿ ಮಾಡಿದ್ದರಿಂದ ಬಿಜೆಪಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.ಬಿಜೆಪಿಯು ಒಬ್ಬ ವಧುವಿಗೋಸ್ಕರ್ ಎಲ್ಲರೂ ಕಿತ್ತಾಡುವ ದೃಶ್ಯವನ್ನು ವರ್ಣರಂಜಿತವಾಗಿ ತೋರಿಸಿ ಮಹಿಳೆಯ ಅಸ್ತಿತ್ವ ಅಸ್ಮಿತೆಗೆ ಧಕ್ಕೆ ಉಂಟು ಮಾಡಿದೆ. ಇಂತಹ ಮಹಿಳಾ ವಿರೋಧಿ ಮತ್ತು ಸಂವಿಧಾನದ ಮೌಲ್ಯದ ವಿರೋಧಿ ಜಾಹಿರಾತು ತರುವ ಮೂಲಕ ಮನುಸ್ಮೃತಿಯ ಕಣೋಟವನ್ನು ಜನಮಾನಸದಲ್ಲಿ ತುಂಬಲು ಹೊರಟಿದೆ. ಇಂತಹ ದೃಶ್ಯಗಳ ಮೂಲಕ ಮಹಿಳೆಯರ ಘನತೆಗೆ ಜ್ಯೋತಿ ತಂದಿರುವುದಲ್ಲದೆ ಈ ಜಾಹಿರಾತು ವೀಕ್ಷಕರ ಮನದಲ್ಲಿ ಮನುಸ್ಮೃತಿಯ ಮೌಲ್ಯಗಳನ್ನು ತುಂಬಿ ಸಂವಿಧಾನದ ದೃಢ ನಿಲುವಾದ ವರ್ಣ-ವರ್ಣ-ಲಿಂಗ-ಜಾತಿಯ ತಾರತಮ್ಯವನ್ನು ಅಳಿಸಿ ಹಾಕುವ ಸಮಾನತೆಯ ಸಮಾಜವಾದಿ ನಾಡು ಕಟ್ಟುವ ಆಶಯವನ್ನು ಮಣ್ಣುಪಾಲು ಮಾಡಲು ಹೊರಟಿದೆ. ಇದು ಭಾರತದ ಪ್ರಜಾಪ್ರಭುತ್ವ ಮೌಲ್ಯಗಳನ್ನು ಹತ್ತಿಕ್ಕುವ ಹುನ್ನಾರ ಬಿಜೆಪಿ ಪಕ್ಷ ಹೊಂದಿದೆ ಎಂದು ಕೀಡಿಕಾರಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments