Google search engine
ಮನೆಕಲೆ-ಕ್ರೀಡೆಕ್ರೀಡಾ ಪಟುಗಳಿಗೆ ಸಾಧಕಿ ಕುಮಾರಿ ಶ್ರೇಂಯಕಾ ಪಾಟೀಲ ಸ್ಪೂರ್ತಿ; ಲಕ್ಷೀ ದತ್ತಾತ್ರೇಯ ಪಾಟೀಲ ರೇವೂರ

ಕ್ರೀಡಾ ಪಟುಗಳಿಗೆ ಸಾಧಕಿ ಕುಮಾರಿ ಶ್ರೇಂಯಕಾ ಪಾಟೀಲ ಸ್ಪೂರ್ತಿ; ಲಕ್ಷೀ ದತ್ತಾತ್ರೇಯ ಪಾಟೀಲ ರೇವೂರ

ಶ್ರೇಂಯಕಾ ಪಾಟೀಲ ಸ್ಪೂರ್ತಿಯಾಗಿದ್ದಾರೆ

ಕಲಬರುಗಿ: ಕಲ್ಯಾಣ ಕರ್ನಾಟಕ ನೆಲದ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕನ್ನುವ ಕ್ರೀಡಾ ಪಟುಗಳಿಗೆ ಯುವ ಪ್ರತಿಭಾವಂತ ಕೀಡಾ ಸಾಧಕಿ ಕುಮಾರಿ ಶ್ರೇಂಯಕಾ ಪಾಟೀಲ ಸ್ಪೂರ್ತಿಯಾಗಿದ್ದಾರೆ ಎಂದು ಶ್ರೀಮತಿ ಲಕ್ಷೀ ದತ್ತಾತ್ರೇಯ ಪಾಟೀಲ ರೇವೂರ ಅಭಿಪ್ರಾಯ ಪಟ್ಟರು.

ಕಲಬರುಗಿ ಗೆಳೆಯರ ಬಳಗ ವತಿಯಿಂದ ಆಯೋಜಿಸಿದ ಕರ್ನಾಟಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭಾರತದ ಮಹಿಳಾ ತಂಡ ಗಯಾನಾ ಅಮೆಜಾನ್ ವಾಥಿಯಾರ್ಸ್ಭಾ ಭಾರತ ತಂಡದ ಗೆಲುವನ್ನು ಪ್ರಮುಖ ಪಾತ್ರ ವಹಿಸಿದ್ದ ಕುಮಾರಿ ಶ್ರೇಯಾಂಕ ಪಾಟೀಲ ಅವರ ಸತ್ಕಾರ ಸಮಾರಂಭ ಉದ್ಘಾಟಿಸಿ ಮಾತಾನಾಡಿದರು.

ಪ್ರಪಂಚದಲ್ಲಿ ಇಂದು ಕ್ರೀಡಾ ವಿಭಾಗದಲ್ಲಿಯೇ ಕ್ರೀಕಟ್ ಆಟ ವೇಗವಾಗಿ ಬೆಳೆಯುತ್ತಿದ್ದು ವಿಶೇಷವಾಗಿ ಯುವ ಸಮೂಹದಲ್ಲಿ ಕ್ರೀಕಟ್ ಅತ್ಯಂತ ಮಹತ್ವದ ಸ್ಥಾನ ಪಡೆದಿದೆ ಎಂದು ನುಡಿದ ಅವರು ಹೇಳಿದರು.

ನಮ್ಮ ರಾಯಲ್ ಚಾಲೆಂಜರ್ಸ್ ಮಹಿಳಾ ತಂಡ ಕಪ್ ಪಡೆದಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಯಲಗೋಡ ಮಠದ ಪೂಜ್ಯ ಶ್ರೀ ಗುರುಲಿಂಗ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು ನೀಲೂರ ಮಠದ ಪೂಜ್ಯ ಶ್ರೀ ಶರಣಯ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು.

ಮಹಾನಗರ ಪಾಲಿಕೆಯ ಸದ್ಯಸರಾದ ಶ್ರೀಮತಿ ಅರ್ಚನಾ ಬಸವರಾಜ ಪಾಟೀಲ ಬಿರಾಳ, ಮಲ್ಲು ಉದನೂರ, ಹಿರಿಯರಾದ ಗುರುಬಸಪ್ಪಗೌಡ ಪಾಟೀಲ ಬಿರಾಳ, ಗೆಳೆಯರ ಬಳಗದ ಮ್ರಮುಖರಾಧ ನಾಗಲಿಂಗಯ್ಯ ಮಠಪತಿ, ಬಸವರಾಜ ಪಾಟೀಲ ಬಿರಾಳ,ಶಿವು ಹಿರೇಮಠ, ಗರುಶಾಂತಪ್ಪ ಸಿಕೇದ,ಮಲ್ಲಿಕಾರ್ಜುನ ಸಾರವಾಡ,ಗುಂಡು ವಾರದ,ಅರುಣಕುಮಾರ ಮಾಶಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments