ಆಳಂದ; ರಾಷ್ಟ್ರದ ಸುಭದ್ರತ ಮತ್ತು ಪ್ರಗತಿಯಲ್ಲಿ ಯುವಕರ ಪಾತ್ರ ಮುಖ್ಯವಾಗಿದ್ದು, ಪ್ರತಿಯೊಬ್ಬ ಯುವಕರೂ ರಾಷ್ಟ್ರದ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮಾದನ ಹಿಪ್ಪರಗಿ ಅಭಿನವ ಶಿವಲಿಂಗ ಸ್ವಾಮೀಜಿ ನುಡಿದರು.
ಪಟ್ಟಣದ ಹೊರವಲಯದ ಡಾ.ಬಿ.ಆರ್. ಅಂಬೇಡ್ಕರ್ ವಸತಿ ನಿಲಯದಲ್ಲಿ ಆಳಂದ ತಾಲ್ಲೂಕು ಸೈನಿಕರ ಅಭಿವೃದ್ಧಿ ಸಂಘವು ಹಮ್ಮಿಕೊಂಡಿರುವ ಉಚಿತ ಸೇನಾ ತರಬೇತಿ ಶಿಬಿರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಯುವಕರಿಂದ ಕೂಡಿದ ಭಾರತೀಯ ಸೇನೆಯು ಜಗತ್ತಿನ ಬಲಿಷ್ಠ ಸೇನೆಯಾಗಿ ರೂಪಗೊಳ್ಳುತ್ತಿದೆ, ಪಂಜಾಬ, ಹರಿಯಾಣ ಸೇರಿದಂತೆ ರಾಜ್ಯದ ಕೊಡುಗೆ ಜಿಲ್ಲೆಯಲ್ಲಿ ಮನೆಗೊಬ್ಬ ಯೋಧನಾಗಬೇಕು ಎಂದು ಬಯಸುತ್ತಾರೆ, ನಮ್ಮ ಮಾಜಿ ಯೋಧರೂ ಉಚಿತವಾಗಿ ಸೇನಾ ತರಬೇತಿ ಆರಂಭಿಸಿರುವದು ಶ್ಲಾಘನೀಯ ಕಾರ್ಯವಾಗಿದೆ. ಎಂದರು.
ಕೆಎಂಎಫ್ ಅಧ್ಯಕ್ಷ ಆರ್ ಕೆ ಪಾಟೀಲ ಮಾತನಾಡಿ ಕೇಂದ್ರ ಸರ್ಕಾರದ ರೈಲ್ವೆ, ಬ್ಯಾಂಕ್, ಸೇನೆ ಮತ್ತಿತರ ಕೇಂದ್ರದ ಇಲಾಖೆಗಳಲ್ಲಿ ನಮ್ಮ ಭಾಗದ ಯುವಕರು ಉದ್ಯೋಗ ಪಡೆಯಲು ಹಿಂಜರಿಯುತ್ತಿದ್ದಾರೆ, ಆದರೆ ನಮ್ಮ ಮಾಜಿ ಯೋಧರು ಭಾರತೀಯ ಸೇನೆಗಾಗಿ ತರಬೇತಿ ಶಿಬಿರ ಆರಂಭಿಸಿರುವದು ಯುವಕರು ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ನಿವೃತ್ತ ಯೋಧ ಗಣಪತರಾವ ಪಾಟೀಲ, ಉಪನ್ಯಾಸಕರಾದ ಮಹಾದೇವ ಮೋಘಾ, ಸಂಜಯ ಪಾಟೀಲ ಮಾತನಾಡಿದರು.
ಸೈನಿಕ ಸಂಘದ ಅಧ್ಯಕ್ಷ ಸಿದ್ದಲಿಂಗ ಮಲಶೆಟ್ಟಿ ಅಧ್ಯಕ್ಷತೆವಹಿಸಿದರು. ಉಪಾಧ್ಯಕ್ಷ ರಾಜು ಕಾಂಬಳೆ, ವಸತಿ ನಿಲಯದ ಮೇಲ್ವಿಚಾರಕ ನಿಂಗಪ್ಪ ದೊಡ್ಡಮನಿ, ನಿವೃತ್ತ ಯೋಧರಾದ ಶಂಕರಪ್ಪ ಮುನ್ನೋ ಹಣಮಂತ ಪಾತಾಳ, ರವಿ ಕಾಂಬಳೆ, ಮೋಹನಗೌಡ ಪಾಟೀಲ, ಮಹೇಶ ಹಿರೋಳಿ, ಈರಯ್ಯ ಸ್ವಾಮಿ, ತಡಕಲ, ಶಿವಲಿಂಗಪ್ಪ ಮಂಟಗಿ, ಪ್ರಮೋದ ಪಂಚಾಳ, ಪ್ರಭು ಪಾಟೀಲ, ಶ್ರೀಕಾಂತ ಚಿಕಲಿ ಉಪಸ್ಥಿತರಿದ್ದರು, ಸಿದ್ಧಾರ್ಥ ಹನೂರೆ ನಿರೂಪಿಸಿದರೆ, ಸದ್ದಾಂ ದೇವಂತಗಿ ವಂದಿಸಿದರು.