Google search engine
ಮನೆಕಲೆ-ಕ್ರೀಡೆಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ; ಶಿವಶರಣಪ್ಪ ಮೂಳೆಗಾಂವ್

ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ; ಶಿವಶರಣಪ್ಪ ಮೂಳೆಗಾಂವ್

ಕಾರ್ಯಕ್ರಮದಲ್ಲಿ 300ಕ್ಕಿಂತ ಹೆಚ್ಚು ಉಪನ್ಯಾಸಕರು ಪ್ರಾಚಾರ್ಯರು ಉಪಸ್ಥಿತರಿದ್ದರು

ಕಲಬುರಗಿ: ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮದಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶಿವಶರಣಪ್ಪ ಮೂಳೆಗಾಂವ್ ಹೇಳಿದರು.

ನಗರದ ಶರಣಬಸವೇಶ್ವರ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕನ್ನಡ ಮೌಲ್ಯಮಾಪನ ಮುಕ್ತಾಯ ಸಮಾರಂಭದಲ್ಲಿ ಮಾತನಾಡುತ್ತ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಗುಣಮಟ್ಟವಾದ ಶಿಕ್ಷಣ ನೀಡಬೇಕು ಉಪನ್ಯಾಸಕರು ಹೊಸದನ್ನ ಕಲಿಬೇಕು ಹೊಸದನ್ನ ಕಲಿಸಬೇಕು ಹಾಗೂ ಕ್ರಿಯಾಶೀಲವಾಗಿರಬೇಕು, ಕನ್ನಡ ಭಾಷೆಯನ್ನು ಪ್ರೀತಿಸಬೇಕು, ಬೆಳೆಸಬೇಕು , ಉಳಿಸಬೇಕು ಹಾಗೂ ಪೋಷಿಸಬೇಕು ಇದು ಕನ್ನಡಿಗರ ಜವಾಬ್ದಾರಿ ಇದೆ ಎಂದು ಮೂಳೆಗಾವ್ ಹೇಳಿದರು.

ಮೌಲ್ಯಮಾಪನ ಕೇಂದ್ರದ ಮುಖ್ಯ ಪರೀಕ್ಷಕರಾದ ಚಂದ್ರಕಾಂತ್ ಬಿರಾದಾರ್ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನಾಡಿ ಇಡೀ ರಾಜ್ಯದಲ್ಲಿ ಕಲ್ಬುರ್ಗಿಯ ಕನ್ನಡ ಮೌಲ್ಯಮಾಪನ ಕೇಂದ್ರ ತುಂಬಾ ಉತ್ತಮವಾಗಿ ಹಾಗೂ ಶಿಸ್ತಿನಿಂದ ಮೌಲ್ಯ ಮಾಪಕರು ಮೌಲ್ಯಮಾಪನ ಮಾಡಿದರು ಎಂದು ಅಭಿನಂದನಾ ಮಾತುಗಳನ್ನು ಆಡಿದರು. ಮೌಲ್ಯಮಾಪನ ಕೇಂದ್ರದ ವೀಕ್ಷಕರಾದ ಅರುಣ್ ಕುಮಾರ್ ಪಾಟೀಲ್ ಅವರು ಮಾತನಾಡುತ್ತಾ ಉಪನ್ಯಾಸಕರಿಗೆ ಹಾಗೂ ಪ್ರಾಚಾರ್ಯರಿಗೆ ಮೌಲ್ಯಮಾಪನ ತುಂಬಾ ಶಿಸ್ತಿನಿಂದ ಸಮಯಕ್ಕೆ ಸರಿಯಾಗಿ ಮಾಡಿದಕ್ಕೆ ಧನ್ಯವಾದಗಳು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಎಸ್ ಬಿ ಆರ್ ಕಾಲೇಜಿನ ಪ್ರಾಚಾರ್ಯರಾದ ಶ್ರೀಶೈಲ ಹೊಗಾಡೆ ಅವರು ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಪಿಯು ಕಾಲೇಜಿನ ಕಲಬುರ್ಗಿ, ಬೀದರ್ ,ಯಾದಗಿರಿ ಜಿಲ್ಲೆಯ ಸೇವಾ ನಿವೃತ್ತಿ ಗೊಳ್ಳುತ್ತಿರುವ ಉಪನ್ಯಾಸಕರು ಹಾಗೂ ಪ್ರಾಚಾರ್ಯರಾದ ಡಾ ಗೌಸುದ್ದೀನ್ ತುಮಕೂರಕರ್ ,ಜಗದೀಶ್ ಬಿಜಾಪುರೆ, ವೈಜನಾಥ್ ಕಾಳೆ ಅವರನ್ನು ಸನ್ಮಾನಿಸಿ ಸತ್ಕರಿಸಲಾಯಿತು.

ಇದೇ ಸಂದರ್ಭದಲ್ಲಿ ಸರ್ಕಾರದಿಂದ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಸದಸ್ಯರಾಗಿ ನೇಮಕಗೊಂಡ ಸತ್ಯಂ ಪಿಯು ಕಾಲೇಜಿನ ಪ್ರಾಚಾರ್ಯ ಬಿ ಎಚ್ ನಿರಗುಡಿ ಅವರಿಗೆ ಸತ್ಕರಿಸಿದರು. ಹಾಗೂ ಕನ್ನಡ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದ ನಾಲ್ಕು ಜನ ಉಪನ್ಯಾಸಕರನ್ನು
ಗೌರವಿಸಲಾಯಿತು. ಕಾರ್ಯಕ್ರಮದ ನಿರೂಪಣೆ ವಿಜಯಕುಮಾರ್ ರೋಣದ ಮಾಡಿದರು ವಂದನಾರ್ಪಣೆಡಾ ಮನ್ಮಥ ಡೊಡೋಳೆ ಅವರು ಮಾಡಿದರು ಕಾರ್ಯಕ್ರಮದಲ್ಲಿ 300ಕ್ಕಿಂತ ಹೆಚ್ಚು ಉಪನ್ಯಾಸಕರು ಪ್ರಾಚಾರ್ಯರು ಉಪಸ್ಥಿತರಿದ್ದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments