Google search engine
ಮನೆಕಲ್ಯಾಣ ಕರ್ನಾಟಕಕಲಬುರಗಿ: ಕಾರಿನಲ್ಲಿದ 30 ಲಕ್ಷ ನಗದು, 2ಲಕ್ಷ ಮೌಲ್ಯದ ಸೀರೆಗಳು ಜಪ್ತಿ

ಕಲಬುರಗಿ: ಕಾರಿನಲ್ಲಿದ 30 ಲಕ್ಷ ನಗದು, 2ಲಕ್ಷ ಮೌಲ್ಯದ ಸೀರೆಗಳು ಜಪ್ತಿ

30 ಲಕ್ಷ ನಗದು, 2ಲಕ್ಷ ಮೌಲ್ಯದ ಸೀರೆಗಳು ಜಪ್ತಿ

ಕಲಬುರಗಿ: ಕಾರಿನಲ್ಲಿ ಸಾಗಿಸುತ್ತಿದ್ದ 30 ಲಕ್ಷ ರೂ.ಗಳು ಹಾಗೂ ಎರಡೂವರೆ ಲಕ್ಷ ರೂ.ಗಳ ಮೌಲ್ಯದ ಸೀರೆಗಳನ್ನು ಚೆಕ್ ಪೋಸ್ಟ್‍ಬಳಿ ಸಿಬ್ಬಂದಿಗಳು ಪತ್ತೆ ಹಚ್ಚಿರುವ ಘಟನೆ ಜಿಲ್ಲೆಯ ಸೇಡಂ ತಾಲ್ಲೂಕಿನ ಮುಧೋಳ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿನ ಚೆಕ್ ಪೋಸ್ಟ್‍ನಲ್ಲಿ ನಡೆದಿದೆ.

ಕಾರಿನಲ್ಲಿದ್ದವರ ಮಾಹಿತಿಯ ಪ್ರಕಾರ ಕಾರಿನಲ್ಲಿ ಹಣ ಹಾಗೂ ಸೀರೆಗಳನ್ನು ತೆಲಂಗಾಣದ ನಾರಾಯಣಪೇಟ್‍ಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಯಾವುದೇ ದಾಖಲೆಗಳು ಇರದೇ ಇದ್ದುದರಿಂದ ಹಣ ಹಾಗೂ ಸೀರೆಗಳನ್ನು ಪೋಲಿಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಮುಧೋಳ್ ಪೋಲಿಸ್ ಠಾಣೆಯ ಪಿಎಸ್ಐ ದೌಲತ್ ಕೆ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments