ಕಲಬುರಗಿ: ಜಿಲ್ಲೆಯಲ್ಲಿರುವ ಎಲ್ಲ ಸರಕಾರಿ ಕಚೇರಿಗಳಲ್ಲಿ ಬಯೋ ಮ್ಯಾಟ್ರಿಕ್ ಕಡ್ಡಾಯಗೊಳಿಸುವಂತೆ ಒತ್ತಾಯಿಸಿ ಅ. 31 ರಿಂದ 10 ದಿನಗಳ ಕಾಲ ಜಿಲ್ಲೆಯಲ್ಲಿ ಸರಕಾರಿ ಕಚೇರಿಗಳಿಗೆ ಭೇಟಿ ನೀಡಿ ಫೇಸ್ ಬುಕ್ ಲೈವ್ ಮಾಡುವ ಅಭಿಯಾನ ನಡೆಸಲಾಗುವುದು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷ ವಿಜಯ ಜಾಧವ ತಿಳಿಸಿದರು.
ಹಲವಾರು ಸರಕಾರಿ ಕಚೇರಿಗಳಲ್ಲಿ ಬಯೋ ಮ್ಯಾಟ್ರಿಕ್ ವ್ಯವಸ್ಥೆ ಇದೆ. ಅವು ಸಹ ಸಮರ್ಪಕವಾಗಿ ನಡೆಯುತ್ತಿಲ್ಲ. ಬಹುತೇಕ ಕಡೆ ಕಚೇರಿಗಳಲ್ಲಿ ಬಯೋ ಮ್ಯಾಟ್ರಿಕ್ ವ್ಯವಸ್ಥೆನೇ ಇಲ್ಲ. ಇದರಿಂದ ನೌಕರರು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಇದರಿಂದ ಕೆಲಸಕ್ಕಾಗಿ ಬರುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದರು.