ಕಲಬುರಗಿ : ಮೇ 5 : ಕಲಬುರಗಿ ಜಿಲ್ಲೆಯಲ್ಲಿ ಮೇ 7ರಂದು ಲೋಕಸಭಾ ಚುನಾವಣೆಯು ನಡೆಯಲಿದ್ದು ಬೆಳಿಗ್ಗೆ 7:00 ಗಂಟೆಯಿಂದ ಸಾಯಂಕಾಲ 6:00 ವರೆಗೆ ಚುನಾವಣಾ ಮತ ಹಾಕುವ ಪ್ರಕ್ರಿಯೆಯು ನಡೆಯಲಿದೆ. ಸಾರ್ವಜನಿಕರು ಮತಗಟ್ಟಿಗೆ ಬರುವಾಗ ಚಿಕ್ಕ ಮಕ್ಕಳನ್ನು ಕರೆ ತರಬೇಡಿ. ಜಿಲ್ಲೆಯಲ್ಲಿ ಏರುತ್ತಿರುವ ಉಷ್ಣಾಂಶದ ಹೆಚ್ಚಳದಿಂದಾಗಿ ಮಕ್ಕಳು ತೊಂದರೆಗೀಡಾಗುವ ಸಾಧ್ಯತೆ ಇರುವುದರಿಂದ ಮಕ್ಕಳನ್ನು ಕರೆತರದಿದ್ದರೆ ಉತ್ತಮ ಎಂದು ಕಲಬುರಗಿ ಉತ್ತರ ಮತಕ್ಷೇತ್ರದ ಚುನಾವಣಾ ಆಯುಕ್ತರು ಸಲಹೆ ನೀಡಿದ್ದಾರೆ